ದಾಖಲೆಗಳಿಲ್ಲದೆ ಭಾರತ-ನೇಪಾಳ ಗಡಿ ದಾಟಲು ಯತ್ನಿಸಿದ ಚೀನಿ ಪ್ರಜೆಯ ಬಂಧನ
Update: 2023-02-18 21:45 IST
ಲಖಿಂಪುರ ಖೇರಿ, ಫೆ.18: ಯಾವುದೇ ಸೂಕ್ತ ದಾಖಲೆಗಳಿಲ್ಲದೆ ಭಾರತ-ನೇಪಾಳ ಗಡಿ ದಾಟಲು ಯತ್ನಿಸಿದ್ದ ಚೀನಿ ಪ್ರಜೆಯೊಬ್ಬನನ್ನು ಸಶಸ್ತ್ರ ಸೀಮಾಬಲ (ಎಸ್ಎಸ್ಬಿ)ದ ಸಿಬ್ಬಂದಿ ಬಂಧಿಸಿದ್ದಾರೆಂದು ಉ.ಪ್ರ. ಪೊಲೀಸರು ಶನಿವಾರ ತಿಳಿಸಿದ್ದಾರೆ.
ಲಖೀಂಪುರ ಖೇರಿಗೆ ಸಮೀಪದ ಗೌರಿಫಾಂಟಾ ಪ್ರದೇಶದಲ್ಲಿ ಚೀನಿ ಪ್ರಜೆಯನ್ನು ಬಂಧಿಸಲಾಯಿತೆಂದ ಎಂದು ಉಪಪೊಲೀಸ್ ಅಧೀಕ್ಷಕ (ಡಿಎಸ್ಪಿ) ಆದಿತ್ಯುಮಾರ್ತಿಳಿಸಿದ್ದಾರೆ.
‘‘ತನಿಖೆಯ ಸಂದರ್ಭ ಚೀನಿ ಪ್ರಜೆಯು ಭಾರತದಲ್ಲಿ ತನ್ನ ವಾಸ್ತವ್ಯಕ್ಕಾಗಿ ಯಾವುದೇ ಸಮರ್ಪಕ ದಾಖಲೆಗಳನ್ನು ಹಾಜರುಪಡಿಸಲು ವಿಫಲನಾದ್ದರಿಂದ ಆತನನ್ನು ಬಂಧಿಸಲಾಯಿತೆಂದು’’ ಅವರು ಹೇಳಿದ್ದಾರೆ. ಸಮಗ್ರ ತನಿಖೆಯ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದಂದು ಡಿಎಸ್ಪಿ ಆದಿತ್ಯ ಕುಮಾರ್ ತಿಳಿಸಿದ್ದಾರೆ.