×
Ad

ಸೋದರಳಿಯನ ವಿವಾಹ ಸಮಾರಂಭಕ್ಕೆ ಐನೂರು ರೂ. ನೋಟುಗಳ ಮಳೆ ಸುರಿಸಿದ ಮಾವ

Update: 2023-02-19 20:25 IST

ಅಹ್ಮದಾಬಾದ್: ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿ ನಡೆದ ವಿವಾಹ ಕಾರ್ಯಕ್ರಮದ ವೇಳೆ ಗ್ರಾಮದ ಮಾಜಿ ಸರಪಂಚ್‌ ಒಬ್ಬರು ತಮ್ಮ ಮನೆ ಮಹಡಿಯಿಂದ ಹಣದ ಮಳೆ ಸುರಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ಗುಜರಾತಿನ ಕೇಕ್ರಿ ತಹಸಿಲ್‌ನ ಅಗೋಲ್ ಗ್ರಾಮದ ಮಾಜಿ ಸರಪಂಚ್ ತಮ್ಮ  ಮನೆಯ ಕೆಳಗೆ ನೆರೆದಿದ್ದ ಗುಂಪಿನೆಡೆಗೆ 500 ರೂಪಾಯಿ ಕರೆನ್ಸಿ ನೋಟುಗಳನ್ನು ಸುರಿಯುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಅವರ ಸೋದರಳಿಯನ ಮದುವೆಯ ಸಂಭ್ರಮಾಚರಣೆಯ ಅಂಗವಾಗಿ ಹಣವನ್ನು ಸುರಿಯಲಾಗಿದೆ ಎಂದು ವರದಿಯಾಗಿದೆ.

ಮಾಜಿ ಸರಪಂಚ ಕರೀಂ ಯಾದವ್ ತಮ್ಮ ಸೋದರಳಿಯ ರಝಾಕ್ ಅವರ  ಮದುವೆಯ ಮೆರವಣಿಗೆಯ ವೇಳೆ ಹಣ ಸುರಿದಿದ್ದಾರೆಂದು ಹೇಳಲಾಗಿದೆ.   ಕೆಳಗೆ ನಿಂತಿರುವ ಜನರು ತಮ್ಮ ಮೇಲೆ ಬೀಳುವ ನೋಟುಗಳನ್ನು ಹಿಡಿಯಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

Similar News