ಅರುಣಾಚಲ ಪ್ರದೇಶದ ಲಘು ಭೂಕಂಪನ
Update: 2023-02-19 22:27 IST
ಗುವಾಹಟಿ, ಫೆ.19: ಅರುಣಾಚಲಪ್ರದೇಶದ ಪಶ್ಚಿಮ ಭಾಗದಲ್ಲಿ ರವಿವಾರ ಮಧ್ಯಾಹ್ನ ಲಘುಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 3.8ರಷ್ಟು ದಾಖಲಾಗಿತ್ತೆಂದು ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರ ತಿಳಿಸಿದೆ.
ರವಿವಾರ ಮಧ್ಯಾಹ್ನ 12:12ರ ವೇಳೆಗೆ ಭೂಕಂಪನವಾಗಿದ್ದು, ಭೂತಾನ್ ಗಡಿ ಸಮೀಪದ ಪಶ್ಚಿಮ ಕಾಮೆಂಗ್ನಲ್ಲಿ, ಭೂಮಿಯಿಂದ 10 ಕಿ.ಮೀ. ಆಳದಲ್ಲಿ ಅದರ ಕೇಂದ್ರಬಿಂದುವಿತ್ತೆಂದು ಪ್ರಕಟಣೆ ತಿಳಿಸಿದೆ.ಆದರೆ ಯಾವುದೇ ಸಾವು,ನೋವು ಅಥವಾ ಕಟ್ಟಡ ಹಾನಿಯ ಬಗ್ಗೆ ಈ ತನಕ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಭೂತಾನ್ನ ಪೂರ್ವ ಭಾಗ ಹಾಗೂ ಕೇಂದ್ರ-ಉತ್ತರ ಅಸ್ಸಾಂನಲ್ಲೂ ಭೂಮಿ ನಡುಗಿದ ಅನುಭವವಾಗಿದೆ ಎಂದು ಮೂಲಗಳು ತಿಳಿಸಿವೆ.