×
Ad

ಜಮ್ಮುಕಾಶ್ಮೀರದಲ್ಲಿ ರಾಹುಲ್‌, ಪ್ರಿಯಾಂಕ ಸ್ನೋ ಸ್ಕೂಟರ್‌ ಸವಾರಿ: ವೀಡಿಯೊ ವೈರಲ್‌

Update: 2023-02-20 18:20 IST

ಹೊಸದಿಲ್ಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತವರ ಸೋದರಿ ಪ್ರಿಯಾಂಕ ಗಾಂಧಿ ವಾದ್ರಾ ಅವರು ಜಮ್ಮು ಕಾಶ್ಮೀರದ ಗುಲ್ಮಾರ್ಗ್‌ ಸ್ಕಿ ರಿಸಾರ್ಟ್‌ನಲ್ಲಿ ಸ್ನೋ ಸ್ಕೂಟರ್‌ ಸವಾರಿ ಮಾಡುತ್ತಿರುವ ವೀಡಿಯೋ ವೈರಲ್‌ ಆಗಿದೆ.

ಒಬ್ಬರ ನಂತರ ಒಬ್ಬರು ರಾಹುಲ್‌ ಮತ್ತು ಪ್ರಿಯಾಂಕ ಸ್ನೋ ಸ್ಕೂಟರ್‌ ಸವಾರಿ ಮಾಡುತ್ತಿರುವುದು ವೀಡಿಯೋದಲ್ಲಿ ಕಾಣಿಸುತ್ತದೆ. ಜೊತೆಗೆ ರಾಹುಲ್‌ ಮತ್ತು ಪ್ರಿಯಾಂಕ ಅವರ ಭದ್ರತಾ ಸಿಬ್ಬಂದಿಗಳೂ ಅವರ ಸುತ್ತ ಸ್ನೋ ಸ್ಕೂಟರ್‌ನಲ್ಲಿ ಸವಾರಿ ಮಾಡುತ್ತಿರುವುದು ಕಾಣಿಸುತ್ತದೆ. ಈ 101 ಸೆಕೆಂಡ್‌ ಅವಧಿಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಲವರು ಈ ವೀಡಿಯೋ ನೋಡಿ ಖುಷಿ ಪಟ್ಟು ಕಮೆಂಟ್‌ ಮಾಡಿದರೆ ಇನ್ನು ಕೆಲವರು ಪ್ರತಿಕ್ರಿಯಿಸಿ ರಾಜಕೀಯ ನಾಯಕರು ಈ ರೀತಿಯ ವೀಡಿಯೋಗಳನ್ನು ಪೋಸ್ಟ್‌ ಮಾಡಿದರೆ ಅವರನ್ನು ಜನರು ಗಂಭೀರವಾಗಿ ಪರಿಗಣಿಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

ಗುಲ್ಮಾರ್ಗ್‌ಗೆ ಖಾಸಗಿ ಭೇಟಿಯಾಗಿ ರಾಹುಲ್‌ ಗಾಂಧಿ ಕಳೆದ ವಾರ ಆಗಮಿಸಿದ್ದರು. ವಾರಾಂತ್ಯದಲ್ಲಿ ಅಲ್ಲಿಗೆ ಪ್ರಿಯಾಂಕ ಕೂಡ ಆಗಮಿಸಿದ್ದರು.

Similar News