ಹಿಂಡೆನ್‌ಬರ್ಗ್ ವರದಿ ಪರಿಣಾಮ: ಮೊದಲ ಬಾರಿಗೆ 50 ಶತಕೋಟಿ ಡಾಲರ್‌ಗಿಂತ ಕಡಿಮೆಯಾದ ಗೌತಮ್ ಅದಾನಿ ಸಂಪತ್ತು
ಶ್ರೀಮಂತರ ಪಟ್ಟಿಯಲ್ಲಿ 25 ನೇ ಸ್ಥಾನಕ್ಕೆ ಕುಸಿತ
ಹೊಸದಿಲ್ಲಿ: ಉದ್ಯಮಿ ಗೌತಮ್ ಅದಾನಿ ಅವರ ನಿವ್ವಳ ಮೌಲ್ಯವು ಹಲವಾರು ವರ್ಷಗಳಲ್ಲಿ ಮೊದಲ ಬಾರಿಗೆ 50 ಶತಕೋಟಿ ಡಾಲರ್‌ಗಿಂತ ಕಡಿಮೆಯಾಗಿದೆ. ಹೀಗಾಗಿ, ಫೋರ್ಬ್ಸ್ ಮತ್ತು ಬ್ಲೂಮ್‌ಬರ್ಗ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಅದಾನಿ ಇಪ್ಪತ್ತೈದನೇ ಸ್ಥಾನಕ್ಕೆ ಕುಸಿದಿದ್ದಾರೆ.
ಹಿಂಡನ್‌ಬರ್ಗ್ ವರದಿ ಪ್ರಕಟಗೊಳ್ಳುವುದಕ್ಕೂ ಮುನ್ನ ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಅದಾನಿ ಅವರು ಕಳೆದ ಕೆಲವು ವಾರಗಳಿಂದ ತಮ್ಮ ಸಂಪತ್ತನ್ನು ಕಳೆದುಕೊಳ್ಳುತ್ತಲೇ ಬರುತ್ತಿದ್ದಾರೆ.
ಫೆಬ್ರವರಿ 20ರ ಫೋರ್ಬ್ಸ್ ವರದಿ ಪ್ರಕಾರ, ಅದಾನಿ ಅವರ ಆಸ್ತಿಯ ನಿವ್ವಳ ಮೌಲ್ಯವು 48 ಬಿಲಿಯನ್ ಡಾಲರ್ ಆಗಿದೆ. $49.5 ಶತಕೋಟಿ ನಿವ್ವಳ ಮೌಲ್ಯದ ಆಸ್ತಿಯೊಂದಿಗೆ ಚೀನಾದ ಜಾಂಗ್ ಯಿಮಿಂಗ್ ಅದಾನಿಗಿಂತ ಮುಂಚೂಣಿಯಲ್ಲಿದ್ದಾರೆ. ಅಮೇರಿಕಾದ ಫಿಲ್ ನೈಟ್ ಮತ್ತು ಕುಟುಂಬ $47.4 ಶತಕೋಟಿ ಮೌಲ್ಯದ ಆಸ್ತಿಯೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.
ಏಷ್ಯಾದ ಸಿರಿವಂತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಚೀನಾದ ಜಾಂಗ್ ಶಾನ್ಶನ್ ಮತ್ತು ಜಾಂಗ್ ಯಿಮಿಂಗ್ ಬಂದಿದ್ದು, ಅದಾನಿ ನಾಲ್ಕನೇ ಸ್ಥಾನಕ್ಕೆ ಇಳಿದಿದ್ದಾರೆ.