ಉಡುಪಿ: ನಶಾ ಮುಕ್ತ ಭಾರತ್ ಅಭಿಯಾನ ಉದ್ಘಾಟನೆ

Update: 2023-02-20 15:34 GMT

ಉಡುಪಿ : ನೇತ್ರಜ್ಯೋತಿ ಇನ್ಸ್‌ಸಿಟ್ಯೂಟ್ ಹೆಲ್ತ್ ಸೈನ್ಸ್ ಉಡುಪಿ, ನೇತ್ರಜ್ಯೋತಿ ಕಾಲೇಜು ಆಫ್ ಫಾರ್ ಮೆಡಿಕಲ್ ಸೈನ್ಸ್, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಉಡುಪಿ-ಕರಾವಳಿ ಹಾಗೂ ಉಡುಪಿ ಲಯನ್ಸ್ ಕ್ಲಬ್‌ನ ಸಂಯುಕ್ತ ಆಶ್ರಯದಲ್ಲಿ ನಶಾಮುಕ್ತ ಭಾರತ್ ಅಭಿಯಾನವನ್ನು ಉಡುಪಿ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಸೋಮವಾರ ಆಯೋಜಿಸಲಾಗಿತ್ತು.

ಸಿಗರೇಟ್ ಮುರಿಯುವ ಮೂಲಕ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದ ನೇತ್ರತಜ್ಞ ಡಾ.ಕೃಷ್ಣ ಪ್ರಸಾದ್ ಕುಡ್ವ ಮಾತನಾಡಿ, ಗಾಂಜಾ, ಅಮಲು ಪದಾರ್ಥ ಸೇವನೆಯ ಯುವಜನತೆಯ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ೨೫-೩೦ ವರ್ಷದಲ್ಲೇ ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ಕ್ಷಣಿಕ ಸುಖಕ್ಕಾಗಿ ವಿದ್ಯಾರ್ಥಿ ಜೀವನವನ್ನು ಬದಿಗೊತ್ತಿ ದುಷ್ಟ ಚಟಗಳ ದಾಸರಾಗಿ ಅಮೂಲ್ಯವಾಗಿರುವ ಜೀವನ ಬಲಿ ಕೊಡಬಾರದು ಎಂದರು.

ಉಡುಪಿ ಎ.ವಿ.ಬಾಳಿಗಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪಿ.ವಿ. ಭಂಡಾರಿ ವಿಶೇಷ ಉಪನ್ಯಾಸ ನೀಡಿದರು. ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಉಡುಪಿ-ಕರಾವಳಿ ಜಿಲ್ಲಾ ಮಾಜಿ ಸಂಯೋಜಕ ಡಾ.ವೈ.ಎಸ್. ರಾವ್, ಉಡುಪಿ ಲಯನ್ಸ್ ಕ್ಲಬ್ ಅಧ್ಯಕ್ಷ ದಿವಾಕರ್ ಶೆಟ್ಟಿ, ಐಎಂಎ ಉಡುಪಿ-ಕರಾವಳಿ ಕಾರ್ಯದರ್ಶಿ ಡಾ.ಕೇಶವ ನಾಯಕ್, ಉಡುಪಿ ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ರವಿರಾಜ್ ಯು.ಎಸ್., ಕೋಶಾಧಿಕಾರಿ ವಿಜಯ್‌ ಕುಮಾರ್ ಮುದ್ರಾಡಿ, ನೇತ್ರಜ್ಯೋತಿ ಶಿಕ್ಷಣ ಸಂಸ್ಥೆ ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್, ಆಡಳಿತಾಧಿಕಾರಿ ಅಬ್ದುಲ್ ಖಾದರ್, ಪ್ರಾಂಶುಪಾಲ ರಜೀಬ್ ಮಂಡಲ, ಮುಖ್ಯ ಶೈಕ್ಷಣಿಕ ಸಂಯೋಜಕ ಬಾಲಕೃಷ್ಣ ಪರ್ಕಳ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಇಜ್ನಾ ಸ್ವಾಗತಿಸಿದರು. ಶಾಂಭವಿ ವಂದಿಸಿದರು. ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.

Similar News