ಇಬ್ಬರು ಯುವಕರನ್ನು ಸುಟ್ಟು ಕೊಂದ ಪ್ರಕರಣದ ಮೂವರು ಆರೋಪಿಗಳು ಪೊಲೀಸ್ ಮಾಹಿತಿದಾರರು: ವರದಿ
ಹೊಸದಿಲ್ಲಿ: ಹರ್ಯಾಣದಲ್ಲಿ ಮೃತದೇಹ ಪತ್ತೆಯಾದ ಇಬ್ಬರು ಮುಸ್ಲಿಂ ವ್ಯಕ್ತಿಗಳ ಹತ್ಯೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾದವರಲ್ಲಿ ಕನಿಷ್ಠ ಮೂವರು ವ್ಯಕ್ತಿಗಳು ಪೊಲೀಸ್ ಮಾಹಿತಿದಾರರಾಗಿದ್ದಾರೆ ಎಂದು Indian Express ಮಂಗಳವಾರ ವರದಿ ಮಾಡಿದೆ.
ಹರ್ಯಾಣದ ನುಹ್ ಜಿಲ್ಲೆಯ ಫಿರೋಜ್‌ಪುರ ಝಿರ್ಕಾ ಮತ್ತು ನಗೀನಾ ಪೊಲೀಸ್ ಠಾಣೆಗಳಲ್ಲಿ ಕಳೆದ ಎರಡು ತಿಂಗಳಲ್ಲಿ ದಾಖಲಾಗಿರುವ ಕನಿಷ್ಠ ನಾಲ್ಕು ಎಫ್ಐಆರ್ ವರದಿಗಳಲ್ಲಿ ರಿಂಕು ಸೈನಿ, ಲೋಕೇಶ್ ಸಿಂಗ್ಲಾ ಮತ್ತು ಶ್ರೀಕಾಂತ್ ಅವರನ್ನು ಪೊಲೀಸ್ ಮಾಹಿತಿದಾರರೆಂದು ವಿವರಿಸಲಾಗಿದೆ ಎಂದು ವರದಿ ಹೇಳಿದೆ.
ಹರ್ಯಾಣದ ಭಿವಾನಿ ಜಿಲ್ಲೆಯಲ್ಲಿ ಫೆಬ್ರವರಿ 16 ರಂದು ಗೋರಕ್ಷಕರು ಅಪಹರಿಸಿ, ನಾಸಿರ್ ಮತ್ತು ಜುನೈದ್ ಎಂಬ ಇಬ್ಬರು ಮುಸ್ಲಿಂ ಯುವಕರನ್ನು ಕೊಂದ ಆರೋಪಿಗಳಲ್ಲಿ ಈ ಮೂವರೂ ಸೇರಿದ್ದಾರೆ. ಈ ಪೈಕಿ ಸೈನಿಯನ್ನು ಮಾತ್ರ ಇದುವರೆಗೆ ಬಂಧಿಸಲಾಗಿದೆ.
ರಾಜಸ್ಥಾನ ಪೊಲೀಸರು ಸೋಮವಾರ ಇನ್ನೂ ಎಂಟು ಮಂದಿಯ ಹೆಸರನ್ನು ಎಫ್‌ಐಆರ್‌ಗೆ ಸೇರಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: ಸಂಸ್ಥೆ ಕುರಿತ ವಿಕಿಪೀಡಿಯಾ ಲೇಖನವನ್ನು ತಿದ್ದುಪಡಿ ಮಾಡಲು ಬಾಡಿಗೆ ಸಂಪಾದಕರನ್ನು ನೇಮಕಗೊಳಿಸಿದ್ದ ಅದಾನಿ ಗ್ರೂಪ್!