Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸಂಸ್ಥೆ ಕುರಿತ ವಿಕಿಪೀಡಿಯಾ ಲೇಖನವನ್ನು...

ಸಂಸ್ಥೆ ಕುರಿತ ವಿಕಿಪೀಡಿಯಾ ಲೇಖನವನ್ನು ತಿದ್ದುಪಡಿ ಮಾಡಲು ಬಾಡಿಗೆ ಸಂಪಾದಕರನ್ನು ನೇಮಕಗೊಳಿಸಿದ್ದ ಅದಾನಿ ಗ್ರೂಪ್!

21 Feb 2023 4:51 PM IST
share
ಸಂಸ್ಥೆ ಕುರಿತ ವಿಕಿಪೀಡಿಯಾ ಲೇಖನವನ್ನು ತಿದ್ದುಪಡಿ ಮಾಡಲು ಬಾಡಿಗೆ ಸಂಪಾದಕರನ್ನು ನೇಮಕಗೊಳಿಸಿದ್ದ ಅದಾನಿ ಗ್ರೂಪ್!

ಹೊಸದಿಲ್ಲಿ: ಸಂಬಂಧಿತ ವಿಕಿಪೀಡಿಯಾ (Wikipedia) ಪುಟಗಳನ್ನು ಬರೆಯಲು ಮತ್ತು ತಿದ್ದುಪಡಿಗಳನ್ನು ಮಾಡಲು ಅದಾನಿ (Adani) ಗ್ರೂಪ್ ಅಘೋಷಿತ ಬಾಡಿಗೆ ಸಂಪಾದಕರನ್ನು ನೇಮಕಗೊಳಿಸಿತ್ತು ಎನ್ನುವುದನ್ನು ತನ್ನ ತನಿಖೆಯು ಬಹಿರಂಗಗೊಳಿಸಿದೆ ಎಂದು ಸಮುದಾಯದ ಸದಸ್ಯರೇ ಬರೆಯುವ ಮತ್ತು ಎಡಿಟ್ ಮಾಡುವ ವಿಕಿಪೀಡಿಯಾದ ಆನ್ಲೈನ್ ವೃತ್ತಪತ್ರಿಕೆ ‘ದಿ ಸೈನ್ಪೋಸ್ಟ್’ ಪ್ರಕಟಿಸಿರುವ ವರದಿಯು ಹೇಳಿದೆ.

ದಿ ಸೈನ್ಪೋಸ್ಟ್ ಇಂಗ್ಲಿಷ್ ವಿಕಿಪೀಡಿಯಾ, ಅದರ ಸಹ ಯೋಜನೆಗಳು, ವಿಕಿಮೀಡಿಯಾ ಫೌಂಡೇಷನ್ ಮತ್ತು ವಿಕಿಮೀಡಿಯಾ ಆಂದೋಲನದ  ಮೇಲೆ ಹೆಚ್ಚಾಗಿ ಗಮನವನ್ನು ಕೇಂದ್ರೀಕರಿಸುತ್ತದೆ.

ವಿಕಿಪೀಡಿಯಾ ಸಮುದಾಯ ಬಳಕೆದಾರ ಸ್ಮಾಲ್ಬೋನ್ಸ್ ಬರೆದಿರುವ ವರದಿಯನ್ನು ‘ತಪ್ಪುಮಾಹಿತಿಯ ವರದಿ’ ವರ್ಗದಡಿ ಟ್ಯಾಗ್ ಮಾಡಲಾಗಿದೆ.

ಅದಾನಿ ಮತ್ತು ಅವರ ಕಂಪನಿಗಳು ವಂಚನೆಯಲ್ಲಿ ತೊಡಗಿಕೊಂಡಿವೆ ಎಂದು ಆರೋಪಿಸಿರುವ ಹಿಂಡನ್ಬರ್ಗ್ ವರದಿಯನ್ನು ಬೆಟ್ಟು ಮಾಡಿರುವ ಸೈನ್ಪೋಸ್ಟ್ ವರದಿಯು ಕಂಪನಿಯು 67 ಶತಕೋಟಿ ಡಾಲರ್ ನಿವ್ವಳ ಸಂಪತ್ತನ್ನು ಕಳೆದುಕೊಂಡಿರುವುದನ್ನು ಉಲ್ಲೇಖಿಸಿ, ಸಂಬಂಧಿತ ವಿಕಿಪೀಡಿಯಾ ಲೇಖನಗಳ ತಟಸ್ಥವಲ್ಲದ ಪಿಆರ್ ಆವೃತ್ತಿಗಳೊಂದಿಗೆ ವಿಕಿಪೀಡಿಯಾ ಓದುಗರನ್ನೂ ವಂಚಿಸಲು ಅದಾನಿ ಮತ್ತು ಅವರ ಉದ್ಯೋಗಿಗಳು ಪ್ರಯತ್ನಿಸಿದ್ದರೇ? ಖಂಡಿತವಾಗಿಯೂ ಅವರು ಹಾಗೆ ಮಾಡಿದ್ದಾರೆ ಎಂದು ಹೇಳಿದೆ.

ದಿ ಸೈನ್ಪೋಸ್ಟ್ ಪ್ರಕಾರ 40 ಕ್ಕೂ ಹೆಚ್ಚು ‘ಸಾಕ್ಪಪೆಟ್’ಗಳು ಅಥವಾ ಅಘೋಷಿತ ಬಾಡಿಗೆ ಸಂಪಾದಕರು ಅದಾನಿ ಕುಟುಂಬ ಮತ್ತು ಕುಟುಂಬ ವ್ಯವಹಾರ ಕುರಿತು ಒಂಭತ್ತು ಸಂಬಂಧಿತ ಲೇಖನಗಳನ್ನು ಸೃಷ್ಟಿಸಿದ್ದರು ಅಥವಾ ಪರಿಷ್ಕರಿಸಿದ್ದರು.

‘ಸಾಕ್ಪಪೆಟರಿ’ ಬಹು ವಿಕಿಪೀಡಿಯಾ ಖಾತೆಗಳ ದುರುಪಯೋಗವನ್ನು ಸೂಚಿಸುತ್ತದೆ. ಈ ಎಲ್ಲ ಖಾತೆಗಳನ್ನು ವಿಕಿಪೀಡಿಯಾ ನಂತರ ನಿರ್ಬಂಧಿಸಿತ್ತು ಅಥವಾ ನಿಷೇಧಿಸಿತ್ತು.
ಅದಾನಿ ಕುರಿತು ಲೇಖನಗಳನ್ನು ತಿರುಚಿದ್ದವರಲ್ಲಿ ಕಂಪನಿಯೊಂದರ ಐಪಿ ವಿಳಾಸವನ್ನು ಬಳಸುತ್ತಿರುವ ವ್ಯಕ್ತಿಯು ಸೇರಿದ್ದು, ಈತ ‘ಅದಾನಿ ಗ್ರೂಪ್’ಗಾಗಿ ಅದರ ಮೂಗಿಗೆ ನೇರವಾಗಿ ಲೇಖನವನ್ನು ಸಂಪೂರ್ಣವಾಗಿ ಮರುರಚಿಸಿದ್ದ ಎಂದು ಸೈನ್ಪೋಸ್ಟ್ ವರದಿಯು ಹೇಳಿದೆ.

ಅವರಲ್ಲಿ ಅನೇಕರು ಹಲವಾರು ಲೇಖನಗಳನ್ನು ಎಡಿಟ್ ಮಾಡಿದ್ದರು ಮತ್ತು ತಟಸ್ಥವಲ್ಲದ ಹಾಗೂ ವಾಸ್ತವಕ್ಕೆ ದೂರವಾದ  ವಿಷಯಗಳನ್ನು ಸೇರಿಸಿದ್ದರು. ಕಂಪನಿಯೊಂದರ ಐಪಿ ವಿಳಾಸವನ್ನು ಬಳಸುತ್ತಿರುವ ಘೋಷಿತ ಬಾಡಿಗೆ ಸಂಪಾದಕನೋರ್ವ ಅದಾನಿ ಗ್ರೂಪ್ ಕುರಿತು ಲೇಖನವನ್ನು ಸಂಪೂರ್ಣವಾಗಿ ಮರುರಚಿಸಿದ್ದ. ಇತರರು ಹಿತಾಸಕ್ತಿ ಸಂಘರ್ಷದ ಎಡಿಟಿಂಗ್ ಕುರಿತು ಎಚ್ಚರಿಕೆಗಳನ್ನು ತೆಗೆದುಹಾಕಿದ್ದರು. ಕೆಲವರು ವಿಕಿಪೀಡಿಯಾದ ಗುಣಮಟ್ಟ ನಿಯಂತ್ರಣ ವ್ಯವಸ್ಥೆಯಿಂದ ನುಣುಚಿಕೊಂಡು ಅಸಾಮಾನ್ಯ ವಿಧಾನಗಳಿಂದ ಲೇಖನಗಳನ್ನು ಸೃಷ್ಟಿಸಿದ್ದರು ಎಂದಿರುವ ವರದಿಯು, ಲೇಖನಗಳನ್ನು ಪುನರ್ಪರಿಶೀಲಿಸುವ ‘ಹ್ಯಾಚೆನ್ಸ್ ’ಎಂಬ ಬಳಕೆದಾರನನ್ನು ತನ್ನ ಸ್ಥಾನದ ದುರುಪಯೋಗಕ್ಕಾಗಿ ಮತ್ತು ಹಲವರು ಅದಾನಿ ಲೇಖನಗಳನ್ನು ಭ್ರಷ್ಟ ರೀತಿಯಲ್ಲಿ ಅನುಮೋದಿಸಿದ್ದಕ್ಕಾಗಿ ನಿಷೇಧಿಸಿರುವುದು ಬಹುಶಃ ನಾವು ಕಂಡುಕೊಂಡಿರುವ ಅತ್ಯಂತ ಕಳವಳಕಾರಿ ಅಂಶವಾಗಿದೆ ಎಂದಿದೆ. ಸೈನ್ಪೋಸ್ಟ್ ಪರಿಶೀಲಿಸಿರುವ ಒಂಭತ್ತು ಲೇಖನಗಳ ಪೈಕಿ ಏಳನ್ನು ಹ್ಯಾಚೆನ್ಸ್ ಎಡಿಟ್ ಮಾಡಿದ್ದ.

ಹೀಗೆ ತಿರುಚಲಾದ ಪುಟಗಳಲ್ಲಿ ಗೌತಮ್ ಅದಾನಿ, ಅವರ ಪತ್ನಿ ಪ್ರೀತಿ ಅದಾನಿ, ಪುತ್ರ ಕರಣ್ ಅದಾನಿ, ಗೌತಮರ ಸೋದರಪುತ್ರ  ಪ್ರಣವ್ ಅದಾನಿ ಹಾಗೂ ಅದಾನಿ ಗ್ರೂಪ್, ಅದಾನಿ ಎಂಟರಪ್ರೈಸಸ್, ಅದಾನಿ ಗ್ರೀನ್ ಎನರ್ಜಿ ಮತ್ತು ಅದಾನಿ ಪೋರ್ಟ್ಸ್ ಕುರಿತ ಲೇಖನಗಳು ಸೇರಿವೆ ಎಂದು ಸೈನ್ಪೋಸ್ಟ್ ವರದಿಯು ತಿಳಿಸಿದೆ.

ಇದನ್ನೂ ಓದಿ: ಎಲ್ಲ ಧರ್ಮಗಳಲ್ಲೂ ವಿಚ್ಛೇದನ ನಡೆಯುವಾಗ ತ್ರಿವಳಿ ತಲಾಖ್ ಅನ್ನು ಅಪರಾಧವನ್ನಾಗಿಸಿದ್ದೇಕೆ: ಪಿಣರಾಯಿ ವಿಜಯನ್ ಪ್ರಶ್ನೆ

share
Next Story
X