×
Ad

ಭಿವಾನಿ ಯುವಕರ ಕೊಲೆ ಪ್ರಕರಣ: ಆರೋಪಿ ಮೋನು ಮನೇಸರ್‌ ಪರ ಹಿಂದೂ ಮಹಾಪಂಚಾಯತ್‌ ಆಯೋಜನೆ

Update: 2023-02-21 19:45 IST

ಮನೇಸರ್: ರಾಜಸ್ಥಾನದ ಭಿವಾನಿಯಲ್ಲಿ ಇಬ್ಬರು‌ ಮುಸ್ಲಿಂ ವ್ಯಕ್ತಿಗಳನ್ನು ಸುಟ್ಟು ಕೊಂದ ಪ್ರಕರಣದ ಪ್ರಮುಖ ಆರೋಪಿ ಮೋನು ಮನೇಸರ್ ವಿರುದ್ಧ “ಸುಳ್ಳು ಎಫ್‌ಐಆರ್” ದಾಖಲಿಸಲಾಗಿದ್ದು, ಇದು ಗೋ ರಕ್ಷಕರ ವಿರುದ್ಧದ ಪಿತೂರಿಯಾಗಿದೆ ಎಂದು ಆರೋಪಿಸಿ ಹಲವಾರು ಮಂದಿ ಹಿಂದೂ ಮಹಾ ಪಂಚಾಯತ್‌ ನಲ್ಲಿ ಭಾಗವಹಿಸಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚೆಗೆ ಫೆಬ್ರವರಿ 16 ರಂದು ಜುನೈದ್ ಮತ್ತು ನಾಸಿರ್ ಹತ್ಯೆಯ ಪ್ರಕರಣದಲ್ಲಿ ಬಜರಂಗದಳದ ಸದಸ್ಯ ಮೋನು ಮನೇಸರ್ ಬಂಧನ ಮತ್ತು ಹರ್ಯಾಣ ಸರಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ತೋರಿಸುವ ಸಂಕೇತವಾಗಿ, ಸ್ಥಳೀಯರು ಗುರಗಾಂವ್ ಹೊರವಲಯದಲ್ಲಿ ಹಿಂದೂ ಮಹಾಪಂಚಾಯತ್ ಅನ್ನು ಆಯೋಜಿಸಿದರು ಮತ್ತು ತಮ್ಮ ಬೇಡಿಕೆಗಳನ್ನು ಬೆಂಬಲಿಸಿ ರ್ಯಾಲಿಯನ್ನೂ ನಡೆಸಿದರು.

ಮೋನು ಮನೇಸರ್ ನಿವಾಸದ ಮೇಲೆ ರಾಜಸ್ಥಾನ ಪೊಲೀಸರು ದಾಳಿ ನಡೆಸುತ್ತಿದ್ದಾರೆ ಎಂಬ ವರದಿಗಳ ನಡುವೆ ಸ್ಥಳೀಯರು ದಿಲ್ಲಿ-ಗುರ್ಗಾಂವ್ ರಾಷ್ಟ್ರೀಯ ಹೆದ್ದಾರಿಯನ್ನು ಸ್ವಲ್ಪ ಸಮಯದವರೆಗೆ ತಡೆದರು. ಆದಾಗ್ಯೂ, ಸ್ಥಳೀಯ ಪೊಲೀಸರು ಮತ್ತು ಪಂಚಾಯತ್ ಸದಸ್ಯರ ಮಧ್ಯಪ್ರವೇಶದ ನಂತರ ತೆರವುಗೊಳಿಸಲಾಯಿತು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಗುರುವಾರ, ಹರ್ಯಾಣದ ಭಿವಾನಿ ಜಿಲ್ಲೆಯಲ್ಲಿ ಇಬ್ಬರು ವ್ಯಕ್ತಿಗಳು ರಾಜಸ್ಥಾನದ ಭರತ್‌ಪುರ ಜಿಲ್ಲೆಯಿಂದ ಗೋ ರಕ್ಷಕರು ಎನ್ನಲಾದ ವ್ಯಕ್ತಿಗಳು ಅಪಹರಣ ಮಾಡಿ ನಂತರ ಕಾರಿನಲ್ಲಿ ಸುಟ್ಟು ಹಾಕಿದ್ದರು. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Similar News