×
Ad

ಸಂಸತ್ ಭವನದಲ್ಲಿಯ ಶಿವಸೇನೆ ಕಚೇರಿ ಏಕನಾಥ ಶಿಂಧೆ ನೇತೃತ್ವದ ಬಣಕ್ಕೆ

Update: 2023-02-21 20:53 IST

ಹೊಸದಿಲ್ಲಿ,ಫೆ.21: ಲೋಕಸಭಾ ಸಚಿವಾಲಯವು ಸಂಸತ್ ಭವನದಲ್ಲಿಯ ಶಿವಸೇನೆ ಕಚೇರಿಯನ್ನು ಏಕನಾಥ ಶಿಂದೆ(Eknath Shinde) ನೇತೃತ್ವದ ಬಣಕ್ಕೆ ಹಂಚಿಕೆ ಮಾಡಿದೆ. ಚುನಾವಣಾ ಆಯೋಗವು ಇತ್ತೀಚಿಗೆ ಶಿಂಧೆ ಬಣಕ್ಕೆ ನಿಜವಾದ ಶಿವಸೇನೆ(Shiv Sena) ಎಂದು ಮಾನ್ಯತೆಯನ್ನು ನೀಡಿತ್ತು.

ಶಿಂದೆ ಬಣದ ಸದನ ನಾಯಕ ರಾಹುಲ್ ಶೇವಾಳೆ(Rahul Shewale) ಅವರ ಪತ್ರಕ್ಕೆ ಉತ್ತರಿಸಿರುವ ಲೋಕಸಭಾ ಸಚಿವಾಲಯವು,ಸಂಸತ್ ಭವನದಲ್ಲಿ ಸೇನೆ ಕಚೇರಿಗಾಗಿ ನಿಯೋಜಿತ ಕೊಠಡಿಯನ್ನು ಶಿಂದೆ ಬಣಕ್ಕೆ ನೀಡಲಾಗಿದೆ ಎಂದು ತಿಳಿಸಿದೆ.

ಕಳೆದ ವಾರ ಶಿಂದೆ ಬಣಕ್ಕೆ ನಿಜವಾದ ಶಿವಸೇನೆ ಎಂಬ ಮಾನ್ಯತೆಯನ್ನು ನೀಡಿದ್ದ ಚುನಾವಣಾ ಆಯೋಗವು, ಚುನಾವಣೆಗಳಲ್ಲಿ ‘ಬಿಲ್ಲು ಮತ್ತು ಬಾಣ’ ಚಿಹ್ನೆಯನ್ನು ಬಳಸಲು ಅನುಮತಿಸಿತ್ತು. ತನ್ಮೂಲಕ ಉದ್ಧವ ಠಾಕ್ರೆಯವರಿಗೆ ತನ್ನ ತಂದೆ ಬಾಳಾಸಾಹೇಬ ಠಾಕ್ರೆಯವರು 1966ರಲ್ಲಿ ಸ್ಥಾಪಿಸಿದ್ದ ಶಿವಸೇನೆಯ ಮೇಲೆ ಹಕ್ಕನ್ನು ನಿರಾಕರಿಸಿತ್ತು.

ಬಳಿಕ ಫೆ.18ರಂದು ಶೇವಾಳೆಯವರು ಪಕ್ಷಕ್ಕೆ ಕಚೇರಿಯನ್ನು ಹಂಚಿಕೆ ಮಾಡುವಂತೆ ಕೋರಿ ಲೋಕಸಭಾ ಸಚಿವಾಲಯಕ್ಕೆ ಪತ್ರ ಬರೆದಿದ್ದರು. ಈವರೆಗೆ ಎರಡೂ ಬಣಗಳು ಸಂಸತ್ ಭವನದಲ್ಲಿಯ ಶಿವಸೇನೆ ಕಚೇರಿಯನ್ನು ಬಳಸುತ್ತಿದ್ದವು.

Similar News