×
Ad

ಜಾರ್ಖಂಡ್ ನ ಅಕ್ರಮ ಹಣ ವರ್ಗಾವಣೆ ಪ್ರಕರಣ: ದೇಶಾದ್ಯಂತ ಈ.ಡಿ.ಯಿಂದ ಶೋಧ ಕಾರ್ಯಾಚರಣೆ

Update: 2023-02-21 21:10 IST

ಹೊಸದಿಲ್ಲಿ,ಫೆ.21: ಜಾರ್ಖಂಡ್ ನ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಅವ್ಯವಹಾರಗಳ ಆರೋಪಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಈ.ಡಿ.)ವು ಮಂಗಳವಾರ ದೇಶದ ಹಲವಾರು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಈ.ಡಿ.ಅಧಿಕಾರಿಗಳು ಜಾಖಂಡ್ ರಾಜಧಾನಿ ರಾಂಚಿ, ಜಮ್ಷೆಡ್ಪುರ ಮತ್ತು ದಿಲ್ಲಿ ಸೇರಿದಂತೆ ಸುಮಾರು ಎರಡು ಡಝನ್ ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿದ್ದಾರೆ ಎಂದು ಅವು ಹೇಳಿದವು.

ಸರಕಾರಿ ಕಾಮಗಾರಿಗಳ ಗುತ್ತಿಗೆಗಳನ್ನು ಪಡೆಯಲು ಕಮಿಷನ್ ಪಾವತಿಸಲಾಗುತ್ತಿದೆ ಎಂಬ ರಾಜ್ಯ ಜಾಗ್ರತ ಘಟಕದ ದೂರನ್ನು ಈ.ಡಿ.ಪ್ರಕರಣವು ಆಧರಿಸಿದೆ. ಈ ಆರೋಪಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಸಾಕ್ಷಾಧಾರಗಳನ್ನು ಸಂಗ್ರಹಿಸುವುದು ಶೋಧ ಕಾರ್ಯಾಚರಣೆಗಳ ಉದ್ದೇಶವಾಗಿದೆ ಎಂದೂ ಮೂಲಗಳು ತಿಳಿಸಿವೆ.

ಮೂಲಗಳು ಹೇಳಿರುವಂತೆ ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮತ್ತು ಕೆಲವು ಎಂಟ್ರಿ ಆಪರೇಟರ್ಗಳು (ಹವಾಲಾ ಡೀಲರ್ಗಳು) ಹಾಗೂ ದಲ್ಲಾಳಿಗಳಿಗೆ ಸೇರಿದ ಸ್ಥಳಗಳಲ್ಲಿ ಈ ದಾಳಿಗಳು ನಡೆದಿವೆ.

Similar News