ಮನುವಾದಿಗಳನ್ನು ಅಧಿಕಾರದಿಂದ ಕೆಳಗಿಳಿಸಿ: ಸುಂದರ ಮಾಸ್ತರ್
ಕಾಪು: ತಾಲೂಕಿನ ಭಂಟಕಲ್ಲು ಗ್ರಾಮ ಶಾಖೆಯ ನೂತನ ಪದಾಧಿಕಾರಿಗಳ ಪಧಗ್ರಹಣ ಮತ್ತು ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶ ಫೆ.19 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕರಾದ ಶ್ರೀ. ಸುಂದರ ಮಾಸ್ತರ್ ಅವರು ಮಾತನಾಡಿ, ಪ್ರಜಾಪ್ರಭುತ್ವದ ಮೂಲ ಉದ್ದೇಶ ಮತ್ತು ಮೂಲ ತತ್ವವನ್ನೇ ನೆಲಸಮ ಮಾಡಿ ಅಧಿಕಾರ ನಡೆಸುತ್ತಿರುವ ಮನುವಾದಿ ಶಕ್ತಿಗಳನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಕರೆಕೊಟ್ಟರು.
ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ ಮಾತನಾಡಿದ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ಯವರು ಈ ದೇಶದ ಮೂಲನಿವಾಸಿಗಳಾದ ನಮ್ಮನ್ನು ಅಂದು ಮೋಸಮಾಡಿ ದೇಶದೊಳಗೆ ನುಗ್ಗಿದ ಪರಕೀಯ ಆರ್ಯರು ಇಂದೂ ಸಹ ಮೋಸದಿಂದಲೇ ಅಧಿಕಾರಕ್ಕೆ ಬಂದು ನಮ್ಮನ್ನು ಆಳುತ್ತಿದ್ದಾರೆ. ಅವರು ಸಂವಿಧಾನ ವಿರೋಧಿಗಳು, ಸಂವಿಧಾನವನ್ನು ಬದಲಾಯಿಸುವುದೇ ಅವರ ಗುರಿ. ಯಾವುದೇ ಕಾರಣಕ್ಕೂ ಸಂವಿಧಾನಕ್ಕೆ ಕುಂದುಬರದಂತೆ ನಾವು ರಕ್ಷಣೆಗೆ ನಿಲ್ಲಬೇಕು ಎಂದರು.
ಕಾರ್ಯಕ್ರಮವನ್ನು ಶಂಕರ ಪದಕಣ್ಣಾಯ ಉಧ್ಘಾಟಿಸಿದರು. ಮುಖ್ಯ ಭಾಷಣ ಕಾರರಾದ ರಾಷ್ಟ್ರೀಯ ಆದಿವಾಸಿ ಏಕತಾ ಪರಿಷತ್ ನ ಜಯಕುಮಾರ್ ಹಾದಿಗೆ ಮಾತನಾಡಿ ನಾವು ಅಂಬೇಡ್ಕರ್ ರವರ ಆಶಯಗಳನ್ನು ಇಡೇರಿಸುವ ಕಾರ್ಯ ಮಾಡಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಕಾಪು ತಾಲೂಕು ಪ್ರಧಾನ ಸಂಚಾಲಕರಾದ ವಿಠಲ ಉಚ್ಚಿಲ , ವಿದ್ಯಾರ್ಥಿ ವಕ್ಕೂಟದ ರಾಜ್ಯ ಸಂಚಾಲಕರಾದ ಎಸ್.ಎಸ್.ಪ್ರಸಾದ್, ಮಹಿಳಾ ಸಂಚಾಲಕಿ ವಸಂತಿ ಶಿವಾನಂದ, ದಲಿತ ನೌಕರರ ವಕ್ಕೂಟದ ಸಂಚಾಲಕರಾದ ರಾಘವೇಂದ್ರ ಬೆಳ್ಳೆ, ವಕೀಲರಾದ ಮಂಜುನಾಥ್. ವಿ. , ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರತನ್ ಕುಮಾರ್ ಶೆಟ್ಟಿ , ಶಿರ್ವ ಪೋಲಿಸ್ ಉಪ ನೀರೀಕ್ಷರಾದ ರಾಘವೇಂದ್ರ .ಸಿ., ಜಿಲ್ಲಾ ಸಂಘಟನಾ ಸಂಚಾಲಕರಾದ ಭಾಸ್ಕರ್ ಮಾಸ್ಟರ್ , ಪರಮೇಶ್ವರ ಉಪ್ಪೂರು , ಅಣ್ಣಪ್ಪ ನಕ್ರೆ , ಗೋಪಾಲಕ್ರಷ್ಣ ಕುಂದಾಪುರ , ಉಡುಪಿ ತಾಲೂಕು ಪ್ರಧಾನ ಸಂಚಾಲಕರಾದ ಶಂಕರ್ ದಾಸ್ ಚೆಂಡ್ಕಳ ಉಪಸ್ಥಿತರಿದ್ದರು.
ಉಮೇಶ ಭಂಟಕಲ್ಲು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.