ಹಿಜಾಬ್‌ ಪ್ರಕರಣದ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್‌ ಸಮ್ಮತಿ

Update: 2023-02-22 08:30 GMT

ಹೊಸದಿಲ್ಲಿ: ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ಕೋರಿ ಕರ್ನಾಟಕದ ವಿದ್ಯಾರ್ಥಿನಿಯರ ಗುಂಪೊಂದು ತುರ್ತು ವಿಚಾರಣೆಗಾಗಿ ಸುಪ್ರೀಂ ಕೋರ್ಟ್‌ಗೆ ಬುಧವಾರ ಅರ್ಜಿ ಸಲ್ಲಿಸಿದ್ದು, ವಿಚಾರಣೆಗೆ ಸಿಜೆಐ ಸಮ್ಮತಿ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

ಕರ್ನಾಟಕದಲ್ಲಿ ವಿಶ್ವವಿದ್ಯಾನಿಲಯ ಪೂರ್ವ ಪರೀಕ್ಷೆಗಳು ಮಾರ್ಚ್ 9 ರಂದು ಪ್ರಾರಂಭವಾಗುವ ನಿರೀಕ್ಷೆಯಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (CJI) DY ಚಂದ್ರಚೂಡ್ ಅವರು ಈ ವಿಷಯವನ್ನು ಪರಿಶೀಲಿಸುವುದಾಗಿ ಮತ್ತು ಪೀಠವನ್ನು ರಚಿಸುವುದಾಗಿ ವಿದ್ಯಾರ್ಥಿ ಅರ್ಜಿದಾರರಿಗೆ ಭರವಸೆ ನೀಡಿದರು.

ಮಾರ್ಚ್ 9 ರಂದು ಪರೀಕ್ಷೆಗಳು ಪ್ರಾರಂಭವಾಗಲಿದ್ದು, ಪರೀಕ್ಷೆಗೆ ಹಾಜರಾಗಕು ಅವಕಾಶ ನೀಡದಿದ್ದರೆ ಬಾಲಕಿಯರ ಒಂದು ಶೈಕ್ಷಣಿಕ ವರ್ಷ ಹಾಳಾಗಲಿದೆ ಎಂದು ವಕೀಲ ಶದನ್ ಫರಾಸ್ ಅವರು ಸಿಜೆಐ ಮುಂದೆ ತುರ್ತು ಪಟ್ಟಿ‌ ಮಾಡುವಂತೆ ಕೋರಿದರು.

"ಪರೀಕ್ಷೆಗೆ ಹಾಜರಾಗದಂತೆ ಅವರನ್ನು ತಡೆಯುವವರು ಯಾರು" ಎಂದು ಸಿಜೆಐ ಕೇಳಿದಾಗ, ವಕೀಲರು, "ಹೆಣ್ಣುಮಕ್ಕಳು ತಲೆಗೆ ಸ್ಕಾರ್ಫ್ ಹಾಕಿಕೊಂಡು ಪರೀಕ್ಷೆಗೆ ಹೋಗಲು ಅನುಮತಿಸುವುದಿಲ್ಲ ಮತ್ತು ಹುಡುಗಿಯರು ಅದಿಲ್ಲದೇ ಪರೀಕ್ಷೆಯನ್ನು ಬರೆಯಲು ಸಿದ್ಧರಿಲ್ಲ, ನಾವು ಅವರಿಗೆ ಸೀಮಿತ ಪರಿಹಾರವನ್ನು ಬಯಸುತ್ತೇವೆ" ಎಂದರು.

ಜನವರಿ 23 ರಂದು, ಹಿರಿಯ ವಕೀಲರಾದ ಮೀನಾಕ್ಷಿ ಅರೋರಾ ಅವರು ಸರ್ಕಾರಿ ಕಾಲೇಜುಗಳಲ್ಲಿ ನಡೆಯುವ ಪರೀಕ್ಷೆಗಳ ತುರ್ತು ಕುರಿತು ಪ್ರಸ್ತಾಪಿಸಿದ ನಂತರ, ತುರ್ತು ಪಟ್ಟಿಯ ಕೋರಿಕೆಯನ್ನು ಪರಿಗಣಿಸಲು ಸಿಜೆಐ ಒಪ್ಪಿಕೊಂಡರು.

Similar News