×
Ad

ಬಿಜೆಪಿ ಕೌನ್ಸಿಲರ್‌ಗಳು ನನ್ನ ಮೇಲೆ ಹಲ್ಲೆಗೆ ಯತ್ನಿಸಿದರು: ದಿಲ್ಲಿ ನೂತನ ಮೇಯರ್ ಶೆಲ್ಲಿ ಒಬೆರಾಯ್ ಆರೋಪ

Update: 2023-02-23 10:08 IST

ಹೊಸದಿಲ್ಲಿ: ಸೋಮವಾರ ಸಂಜೆ ದಿಲ್ಲಿಯ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಸದನದ ಅಧಿವೇಶನದಲ್ಲಿ ಗದ್ದಲ ಉಂಟಾಯಿತು. ಭಾರತೀಯ ಜನತಾ ಪಕ್ಷದ ಕೌನ್ಸಿಲರ್ ತನ್ನ ಮೇಲೆ "ದಾಳಿ" ಮಾಡಲು ಪ್ರಯತ್ನಿಸಿದರು ಎಂದು ಹೊಸದಾಗಿ ಆಯ್ಕೆಯಾದ ದಿಲ್ಲಿ ಮೇಯರ್ ಶೆಲ್ಲಿ ಒಬೆರಾಯ್(Shelly Oberoi) ಅವರು ಆರೋಪಿಸಿದ್ದಾರೆ.

ಈ ಆರೋಪಕ್ಕೆ ಪ್ರತಿಕ್ರಿಯಿಸಿದ ದಿಲ್ಲಿ ಸಿಎಂ ಅರವಿಂದ  ಕೇಜ್ರಿವಾಲ್, ಇದು "ಸ್ವೀಕಾರಾರ್ಹವಲ್ಲ" ಎಂದು ಹೇಳಿದ್ದಾರೆ.

ಎಎಪಿ ಹಾಗೂ  ಬಿಜೆಪಿ ಕೌನ್ಸಿಲರ್‌ಗಳು ಎಂಸಿಡಿ ಹೌಸ್‌ನೊಳಗೆ ಪರಸ್ಪರ ನೀರಿನ ಬಾಟಲಿಗಳನ್ನು ಎಸೆದುಕೊಂಡ   ದೃಶ್ಯಗಳು ಎಲ್ಲರನ್ನು ಅಚ್ಚರಿಗೊಳಿಸಿದೆ.

ಸದನದ ಕಲಾಪಗಳ ವೇಳೆ ಬಿಜೆಪಿ ಕಾರ್ಪೊರೇಟರ್ ಶಿಖಾ ರಾಯ್  ಅವರು ಮೇಯರ್ ಬಳಿಗೆ ತೆರಳಿ ಮೈಕ್ ಕಸಿದುಕೊಳ್ಳಲು ಯತ್ನಿಸಿದರು ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ. ಘಟನೆಯ ಕುರಿತು ಪೊಲೀಸರಿಗೆ ದೂರು ನೀಡುವುದಾಗಿ ಪಕ್ಷ ಹೇಳಿದೆ.

ಶೆಲ್ಲಿ ಒಬೆರಾಯ್ ಅವರು ಟ್ವಿಟರ್‌ನಲ್ಲಿ ಬಿಜೆಪಿಯ ಗೂಂಡಾಗಿರಿಯನ್ನು ಫ್ಲ್ಯಾಗ್ ಮಾಡಿದ್ದಾರೆ.

 "ಸುಪ್ರೀಂಕೋರ್ಟ್ ಆದೇಶದಂತೆ ನಾನು ಸ್ಥಾಯಿ ಸಮಿತಿ ಚುನಾವಣೆಯನ್ನು ನಡೆಸುತ್ತಿದ್ದಾಗ ಬಿಜೆಪಿ ಕೌನ್ಸಿಲರ್‌ಗಳು ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ! ಇದು ಬಿಜೆಪಿಯ ಗುಂಡಾಗಿರಿಯಾಗಿದ್ದು, ಮಹಿಳಾ ಮೇಯರ್ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ್ದಾರೆ" ಎಂದು ದಿಲ್ಲಿ ಮೇಯರ್ ಹೇಳಿದರು.

Similar News