×
Ad

ಇಬ್ಬರು ಯುವಕರನ್ನು ಸುಟ್ಟು ಕೊಂದ ಪ್ರಕರಣ: ಆರೋಪಿ ಮೋನು ಮನೇಸರ್‌ಗೆ ರಾಜಸ್ಥಾನ ಪೊಲೀಸರಿಂದ ಕ್ಲೀನ್‌ ಚಿಟ್; ವರದಿ

Update: 2023-02-23 16:46 IST

ಜೈಪುರ್: ಇಬ್ಬರು ಮುಸ್ಲಿಂ ಯುವಕರ ಮೃತದೇಹಗಳು ಹರ್ಯಾಣಾದ ಭಿವಾನಿ ಎಂಬಲ್ಲಿ ವಾಹನವೊಂದರಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣದ ಪ್ರಮುಖ ಆರೋಪಿ, ಬಜರಂಗದಳ ಕಾರ್ಯಕರ್ತ ಮೋನು ಮನೇಸರ್‌ ಎಂಬಾತನಿಗೆ ರಾಜಸ್ಥಾನ ಪೊಲೀಸರು ಗುರುವಾರ ಕ್ಲೀನ್‌ ಚಿಟ್‌ ನೀಡಿದ್ದಾರೆಂದು ಹಲವು ಟಿವಿ ಮಾಧ್ಯಮ ವರದಿಗಳನ್ನಾಧರಿಸಿ freepressjournal.in ವರದಿ ಮಾಡಿದೆ.

ನಾಸಿರ್‌ ಮತ್ತು ಜುನೈದ್‌ ಎಂಬ ಹೆಸರಿನ ಈ ಇಬ್ಬರು ಮುಸ್ಲಿಂ ಯುವಕರ ಶಂಕಿತ ಹತ್ಯೆ ಪ್ರಕರಣದಲ್ಲಿ ರಾಜಸ್ಥಾನ ಪೊಲೀಸರು ಎಂಟು ಆರೋಪಿಗಳನ್ನು ಗುರುತಿಸಿದ್ದರು. ಮೃತ ಯುವಕರು ಗೋಕಳ್ಳಸಾಗಣಿಕೆದಾರರು ಎಂದು ಆರೋಪಿಸಲಾಗಿತ್ತು.

ಮೋನು ಮನೇಸರ್‌ ಫೋಟೋ ಸೇರಿದಂತೆ ಇತರ ಆರೋಪಿಗಳ ಹೆಸರುಗಳು ಮತ್ತು ಫೋಟೋಗಳನ್ನೂ ಪೊಲೀಸರು  ಬಿಡುಗಡೆಗೊಳಿಸಿದ್ದರು. ಆದರೆ ಮರುದಿನವೇ ಮೋನು ಮನೇಸರ್‌ ಮತ್ತು ಲೋಕೇಶ್‌ ಸಿಂಗ್ಲಾ ಎಂಬಿಬ್ಬರಿಗೆ ಕ್ಲೀನ್‌ ಚಿಟ್‌ ನೀಡಲಾಗಿದೆ ಎಂದು ಹೇಳಲಾಗಿದೆ.

ಹಿಂದು ಸಂಘಟನೆಗಳು ಭಿವಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಪಂಚಾಯತ್‌ ಕೂಡ ನಡೆಸಿ ಮೋನು ಮನೇಸರ್‌ಗೆ ಬೆಂಬಲ ಘೋಷಿಸಿವೆ.

ಮೋಹಿತ್‌ ಯಾದವ್‌ ಅಲಿಯಾಸ್‌ ಮೋನು ಮನೇಸರ್‌, ಗುರುಗ್ರಾಮ್‌ ಬಜರಂಗದಳದ ಜಿಲ್ಲಾ ಸಂಚಾಲಕನಾಗಿದ್ದಾನೆ ಹಾಗೂ ಗೋ ರಕ್ಷಣಾ ಪಡೆಯೊಂದಿಗೂ ನಂಟು ಹೊಂದಿದ್ದಾನೆಂದು ಹೇಳಲಾಗಿದೆ.

UPDATE: 

ಈ ವರದಿಯ ಬಗ್ಗೆ altnews.com ಸತ್ಯ ಪರಿಶೀಲನೆ ನಡೆಸಿದ್ದು, ಮೋನು ಮನೇಸರ್ ಗೆ ಕ್ಲೀನ್ ಚಿಟ್ ನೀಡಿಲ್ಲ ಎಂದು ರಾಜಸ್ಥಾನ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. 

ಆ ವರದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Similar News