×
Ad

ಮಹಿಳಾ ಟ್ವೆಂಟಿ-20 ವಿಶ್ವಕಪ್ ಸೆಮಿ ಫೈನಲ್: ಭಾರತದ ಗೆಲುವಿಗೆ 173 ರನ್ ಗುರಿ ನೀಡಿದ ಆಸ್ಟ್ರೇಲಿಯ

Update: 2023-02-23 20:07 IST

  ಕೇಪ್‌ಟೌನ್, ಫೆ.23: ಆರಂಭಿಕ ಆಟಗಾರ್ತಿ ಬೆಥ್ ಮೂನಿ(54 ರನ್, 37 ಎಸೆತ)ಅರ್ಧಶತಕ, ,ನಾಯಕಿ ಮೆಗ್ ಲ್ಯಾನಿಂಗ್(ಔಟಾಗದೆ 49ರನ್,34 ಎಸೆತ)ಹಾಗೂ ಅಶ್ಲೆ ಗಾರ್ಡ್ನರ್(31 ರನ್, 28 ಎಸೆತ) ಸಾಂದರ್ಭಿಕ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯ ಕ್ರಿಕೆಟ್ ತಂಡ ಗುರುವಾರ ನಡೆದ ಮಹಿಳಾ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಮೊದಲ ಸೆಮಿ ಫೈನಲ್‌ನಲ್ಲಿ ಭಾರತದ ಗೆಲುವಿಗೆ 173 ರನ್ ಗುರಿ ನೀಡಿದೆ. 

ಟಾಸ್ ಜಯಿಸಿದ ಆಸ್ಟ್ರೇಲಿಯ ಮೊದಲು ಬ್ಯಾಟಿಂಗ್ ಆಯ್ದುಕೊಂಡು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 172 ರನ್ ಗಳಿಸಿದೆ.

ಮೊದಲ ವಿಕೆಟಿಗೆ 52 ರನ್ ಜೊತೆಯಾಟ ನಡೆಸಿದ ಅಲಿಸಾ ಹೀಲಿ(25 ರನ್, 26 ಎಸೆತ) ಹಾಗೂ ಮೂನಿ ಉತ್ತಮ ಆರಂಭ ಒದಗಿಸಿದರು.

ಭಾರತದ ಪರ ಶಿಖಾ ಪಾಂಡೆ(2-32)ಎರಡು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.
 

Similar News