ಕಾಂಕ್ರೀಟ್ ಕಾಮಗಾರಿ: ಸಂಚಾರ ನಿರ್ಬಂಧ
Update: 2023-02-23 20:23 IST
ಉಡುಪಿ, ಫೆ.23: ಉಡುಪಿ ನಗರಸಭಾ ವ್ಯಾಪ್ತಿಯ ಕುಂಜಿಬೆಟ್ಟು ವಾರ್ಡಿನ ಶಾರದ ಕಲ್ಯಾಣ ಮಂಟಪ ರಸ್ತೆಯಿಂದ ಸೇತುವೆವರೆಗೆ ರಸ್ತೆ ಕಾಂಕ್ರೀಟ್ ಕಾಮಗಾರಿ ಕೈಗೊಳ್ಳುವ ಸಲುವಾಗಿ ಇಂದಿನಿಂದ 30 ದಿನಗಳವರೆಗೆ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ಸಾರ್ವಜನಿಕರು ಅಕ್ಕ-ಪಕ್ಕದ ಬದಲೀ ರಸ್ತೆಯನ್ನು ಬಳಸಿ, ಸಹಕರಿಸುವಂತೆ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.