×
Ad

ಮೋದಿಗೆ ಸುಪ್ರೀಂ ಕೋರ್ಟ್ ಹೆದರುತ್ತದೆ: ಖ್ಯಾತ ವಕೀಲ ದುಷ್ಯಂತ್ ದವೆ ಸ್ಫೋಟಕ ಹೇಳಿಕೆ

"ಪ್ರಶ್ನೆ ಮಾಡುವ ನ್ಯಾಯಾಂಗ ವ್ಯವಸ್ಥೆ ಇಲ್ಲದೆ ಹೋದರೆ ನ್ಯಾಯದ ಪರಿಕಲ್ಪನೆಯನ್ನು ವಿಫಲಗೊಳಿಸುತ್ತದೆ"

Update: 2023-02-23 20:37 IST

ಹೊಸದಿಲ್ಲಿ: ಗಮನಾರ್ಹ ಬೆಳವಣಿಗೆಯೊಂದರಲ್ಲಿ, ನ್ಯಾಯಾಂಗ ವ್ಯವಸ್ಥೆ ಹಾಗೂ ಕೊಲಿಜಿಯಂ ವ್ಯವಸ್ಥೆ ವಿರುದ್ಧ ಟೀಕಾಪ್ರಹಾರ ನಡೆಸಿರುವ ಖ್ಯಾತ ವಕೀಲ, ಮಾಜಿ ಸುಪ್ರೀಂಕೋರ್ಟ್ ಬಾರ್ ಕೌನ್ಸಿಲ್ ಅಧ್ಯಕ್ಷ ದುಷ್ಯಂತ್ ದವೆ (Dushyant Dave), ಇಂದಿರಾ ಗಾಂಧಿಯಂತೆ ಬಲಿಷ್ಠ ಪ್ರಧಾನಿಯಾಗಿರುವ ನರೇಂದ್ರ ಮೋದಿಗೆ (Narendra Modi)  ನ್ಯಾಯಾಂಗ ತನ್ನನ್ನು ಪ್ರಶ್ನಿಸುವುದು ಇಷ್ಟವಾಗುವುದಿಲ್ಲ. ಹೀಗಾಗಿ ಸುಪ್ರೀಂಕೋರ್ಟ್ (Supreme Court) ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೋಗಲು ಹೆದರುತ್ತಿದೆ" ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.

The Wire ಸುದ್ದಿ ಸಂಸ್ಥೆಯ ಸಂದರ್ಶನಕಾರ ಕರಣ್ ಥಾಪರ್‌ಗೆ 36 ನಿಮಿಷಗಳ ಸಂದರ್ಶನ ನೀಡಿರುವ ದುಷ್ಯಂತ್ ದವೆ, "ದಿನದ ಆರಂಭದಿಂದ ದಿನದ ಅಂತ್ಯದವರೆಗೆ ಪ್ರಶ್ನೆ ಮಾಡುವ ನ್ಯಾಯಾಂಗ ವ್ಯವಸ್ಥೆ ಇಲ್ಲದೆ ಹೋದರೆ, ಅಂತಹ ನ್ಯಾಯಾಂಗ ವ್ಯವಸ್ಥೆ ದೇಶ, ಸಂವಿಧಾನ ಹಾಗೂ ನ್ಯಾಯದ ಪರಿಕಲ್ಪನೆಯನ್ನು ವಿಫಲಗೊಳಿಸುತ್ತದೆ" ಎಂದು ಹೇಳಿದ್ದಾರೆ.

ನ್ಯಾಯಾಧೀಶರ ಕಾರ್ಯವೈಖರಿಯ ಕುರಿತೂ ಟೀಕಾಪ್ರಹಾರ ನಡೆಸಿರುವ ಅವರು, "ನಾವು ದೊಡ್ಡ ಸಂಖ್ಯೆಯ ಪ್ರಶ್ನಾರ್ಹ ನ್ಯಾಯಾಧೀಶರನ್ನು ಹೊಂದಿದ್ದೇವೆ. ಅವರು ಒಂದೋ ಅನುಭವದ ಕೊರತೆ ಹೊಂದಿದ್ದಾರೆ ಅಥವಾ ಜ್ಞಾನದ ಕೊರತೆ ಹೊಂದಿದ್ದಾರೆ ಮತ್ತು ಅವರಲ್ಲಿ ಬಹುತೇಕರಿಗೆ ಬದ್ಧತೆಯ ಕೊರತೆ ಇದೆ" ಎಂದು ವಿಶ್ಲೇಷಿಸಿದ್ದಾರೆ.

ಕೊಲಿಜಿಯಂ ವ್ಯವಸ್ಥೆ ಕುರಿತೂ ತೀಕ್ಷ್ಣ ಟೀಕೆ ಮಾಡಿರುವ ದುಷ್ಯಂತ್ ದವೆ, ಕೊಲಿಜಿಯಂ ರಚನೆಗೆ ಕಾರಣವಾದ 1993ರ ತೀರ್ಪನ್ನು ಉಲ್ಲೇಖಿಸಿ, ಆ ವ್ಯವಸ್ಥೆಯ ಪ್ರಕಾರ, ಅತ್ಯುತ್ತಮ ನ್ಯಾಯಾಧೀಶರನ್ನು ಆಯ್ಕೆ ಮಾಡಬೇಕು. ಆದರೆ, ಅವರು ಅದನ್ನು ಮಾಡಿದ್ದಾರೆಯೆ? ನನ್ನ ದೃಷ್ಟಿಯಲ್ಲಿ ಇಲ್ಲ. ಬಾರ್‌ನಲ್ಲಿ ನನ್ನ ಸಹೋದ್ಯೋಗಿಗಳಾಗಿದ್ದ ಹಲವರು ಕಳೆದ 10-15 ವರ್ಷದಲ್ಲಿ, ವಿಶೇಷವಾಗಿ ಕಳೆದ 7-8 ವರ್ಷಗಳಲ್ಲಿ ನೇಮಕವಾಗಿರುವವರು ಯಾವ ಕಾರಣಕ್ಕೂ ನ್ಯಾಯಾಧೀಶರಾಗಲು ಅರ್ಹರಾಗಿರಲಿಲ್ಲ. ಅವರ ಈಗಿನ ಕಾರ್ಯನಿರ್ವಹಣೆಯಂತೆ ಅವರ ನೀಡುವ ತೀರ್ಪುಗಳೂ ಇವೆ. ಅವರು ನ್ಯಾಯಾಲಯದ ಸಭಾಂಗಣದಲ್ಲಿ ವ್ಯಕ್ತಪಡಿಸುವ ಪ್ರತಿಕ್ರಿಯೆಗಳನ್ನು ನೋಡಿದಾಗ, ಇಂತಹ ಪ್ರತಿಕ್ರಿಯೆಗಳನ್ನು ಪರಿಗಣಿಸುವಲ್ಲಿ ಕೊಲಿಜಿಯಂ ವ್ಯವಸ್ಥೆ ಎಲ್ಲಿ ಸೋಲುತ್ತಿದೆ ಎಂದು ನನಗನ್ನಿಸುತ್ತದೆ" ಎಂದು ಅಭಿಪ್ರಾಯ ಪಟ್ಟಿದ್ದಾರೆ.

ನಾನು ಹೀಗೆ ಏಕೆ ಮಾತನಾಡುತ್ತಿದ್ದೇನೆಂದರೆ, ಯಾರಿಗೂ ಮಾತನಾಡುವುದು ಬೇಕಿಲ್ಲ. ಬಾರ್ ಮೌನವಾಗಿದೆ ಮತ್ತು ಕೊಲಿಜಿಯಂ ವ್ಯವಸ್ಥೆ ಎಲ್ಲವೂ ಸಮರ್ಪಕವಾಗಿದೆ ಎಂಬಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಇಬ್ಬರು ಯುವಕರನ್ನು ಸುಟ್ಟು ಕೊಂದ ಪ್ರಕರಣ: ಆರೋಪಿ ಮೋನು ಮನೇಸರ್‌ಗೆ ರಾಜಸ್ಥಾನ ಪೊಲೀಸರಿಂದ ಕ್ಲೀನ್‌ ಚಿಟ್; ವರದಿ

Full View

Similar News