×
Ad

ಸುಕೇಶ್ ಚಂದ್ರಶೇಖರ್ ಸೆಲ್ ಮೇಲೆ ದಾಳಿ 1.5 ಲಕ್ಷ ರೂ. ಮೌಲ್ಯದ ಚಪ್ಪಲಿ ಪತ್ತೆ

Update: 2023-02-23 21:05 IST

ಹೊಸದಿಲ್ಲಿ, ಫೆ. 23: ವಂಚನೆಯ ಆರೋಪಕ್ಕೆ ಒಳಗಾದ ಸುಕೇಶ್ ಚಂದ್ರಶೇಖರ್‌(Sukesh Chandrasekhar)ನ ಕಾರಾಗೃಹದ ಸೆಲ್‌ಗೆ ಅಧಿಕಾರಿಗಳು ದಾಳಿ ನಡೆಸಿದ್ದು, 1.5 ಲಕ್ಷ ರೂ. ಮೌಲ್ಯದ ಚಪ್ಪಲಿ, 80 ಸಾವಿರ ರೂ. ಮೌಲ್ಯದ 3 ಜೊತೆ ಜೀನ್ಸ್ ಹಾಗೂ ಇತರ ವಸ್ತುಗಳು ಸೇರಿದಂತೆ ಹಲವು ಐಷಾರಾಮಿ ವಸ್ತುಗಳನ್ನು ಪತ್ತೆ ಮಾಡಿದ್ದಾರೆ.

ವ್ಯಾಪಕವಾಗಿ ಶೇರ್ ಆಗುತ್ತಿರುವ ಮಂಡೋಲಿ ಕಾರಾಗೃಹದ ಸಿಸಿಟಿವಿ ದೃಶ್ಯಾವಳಿಯಲ್ಲಿ ಅಧಿಕಾರಿಗಳು ದಾಳಿ ನಡೆಸುತ್ತಿರುವುದು ಕಂಡು ಬಂದಿದೆ. ಅಧಿಕಾರಿಗಳ ತಂಡ ಹಾಗೂ ಕಾರಾಗೃಹದ ಅಧಿಕಾರಿಗಳು ಸುಕೇಶ್‌ನನ್ನು ಇರಿಸಲಾದ ಕಾರಾಗೃಹದ ಕೊಠಡಿಗೆ ಪ್ರವೇಶಿಸುತ್ತಿರುವುದು ಹಾಗೂ ಈ ಸಂದರ್ಭ ಸುಕೇಶ್ ಚಂದ್ರಶೇಖರ್ ದುಃಖಿಸುತ್ತಿರುವುದು ವ್ಯಾಪಕವಾಗಿ ಶೇರ್ ಆದ ವೀಡಿಯೊದಲ್ಲಿ ಕಂಡು ಬಂದಿದೆ.

ಶೋಧ ಕಾರ್ಯಾಚರಣೆ ನಡೆಯುತ್ತಿರುವಾಗ ಕೊಠಡಿಯಲ್ಲಿ ಸುಕೇಶ್ ಚಂದ್ರಶೇಖರ್ ಮಾತ್ರ ಇರುವುದು ವೀಡಿಯೊದಲ್ಲಿ ಕಂಡು ಬಂದಿದೆ. 

Similar News