×
Ad

ಆಸ್ಪತ್ರೆಯಲ್ಲಿ ಮೃತಪಟ್ಟಿದೆ ಎಂದು ಘೋಷಿಸಲ್ಪಟ್ಟಿದ್ದ ನವಜಾತ ಶಿಶು ಮನೆಯಲ್ಲಿ ಜೀವಂತ, ನಂತರ ಆಸ್ಪತ್ರೆಯಲ್ಲೇ ಮೃತ್ಯು!

Update: 2023-02-23 21:38 IST

ಹೊಸದಿಲ್ಲಿ: ಲೋಕ ನಾಯಕ ಆಸ್ಪತ್ರೆಯಲ್ಲಿ ಮೃತಪಟ್ಟಿದೆ ಎಂದು ಘೋಷಿಸಲ್ಪಟ್ಟಿದ್ದ ಮೂರು ದಿನದ ನವಜಾತ ಶಿಶು, ಮನೆಯಲ್ಲಿ ಜೀವಂತವಾಗಿ ನಂತರ ಮತ್ತೆ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿರುವ ಘಟನೆ ನಡೆದಿದೆ ಎಂದು timesofindia.com ವರದಿ ಮಾಡಿದೆ.

ಆ ನವಜಾತ ಶಿಶುವು ಅವಧಿಗೆ ಮುಂಚಿತವಾಗಿ ಜನಿಸಿತ್ತು.

ನವಜಾತ ಶಿಶುಗಳ ತುರ್ತು ನಿಗಾ ಘಟಕದಲ್ಲಿ ವೆಂಟಿಲೇಟರ್ ನೆರವಿನಲ್ಲಿದ್ದ ಮಗುವು ಸಂಜೆ ಸುಮಾರು 4 ಗಂಟೆಗೆ ಮೃತಪಟ್ಟಿತು ಎಂದು ಕುಟುಂಬದ ಸದಸ್ಯರು ದೃಢಪಡಿಸಿದ್ದಾರೆ. ಹೀಗಿದ್ದೂ, ಮಗುವನ್ನು ರಾತ್ರಿ 11 ಗಂಟೆವರೆಗೆ ಕುಟುಂಬಕ್ಕೆ ಹಸ್ತಾಂತರಿಸಲಾಗಿರಲಿಲ್ಲ ಎಂದು ಮಗುವಿನ ಚಿಕ್ಕಪ್ಪ ತಿಳಿಸಿದ್ದಾರೆ.

ರವಿವಾರ ಸಂಜೆ ರುಕ್ಸರ್ ಎಂಬ ಮಹಿಳೆ ಮಗುವಿಗೆ ಜನ್ಮ ನೀಡಿದ್ದಳು ಹಾಗೂ ಪ್ರಸೂತಿ ತಂಡವು ಮಗು ಮೃತಪಟ್ಟಿದೆ ಎಂದು ಘೋಷಿಸಿತ್ತು. ಅವರು ಮಗುವನ್ನು ಮುಚ್ಚಿದ ಗವಸಿನಲ್ಲಿ ಹಸ್ತಾಂತರಿಸಿದ್ದರು. ಕುಟುಂಬದ ಸದಸ್ಯರು ಮಗುವಿನ ಅಂತ್ಯಕ್ರಿಯೆ ನೆರವೇರಿಸಲು ಸಿದ್ಧತೆ ನಡೆಸುತ್ತಿರುವಾಗ ಮಗುವಿನಲ್ಲಿ ಚಲನೆಯನ್ನು ಗಮನಿಸಿ ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದರು.

ಆದರೆ, ವೈದ್ಯರು ಮೊದಲಿಗೆ ಪ್ರಕರಣದ ಕಡೆ ಗಮನ ನೀಡಲಿಲ್ಲ ಹಾಗೂ ಮಗುವನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಯಿತು. ಉಪ ಪೊಲೀಸ್ ಆಯುಕ್ತರು ಮಧ್ಯಪ್ರವೇಶಿಸಿದ ನಂತರ ಮಗುವನ್ನು ತೀವ್ರ ನಿಗಾದಡಿ ಇಡಲಾಯಿತು ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

Similar News