ಮಹಿಳಾ ಟ್ವೆಂಟಿ-20 ವಿಶ್ವಕಪ್ ಟೂರ್ನಿ: ಸೆಮಿ ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ 5 ರನ್‌ನಿಂದ ಸೋತ ಭಾರತ

ನಾಯಕಿ ಹರ್ಮನ್‌ಪ್ರೀತ್ ಕೌರ್ ಅರ್ಧಶತಕ ವ್ಯರ್ಥ

Update: 2023-02-23 16:28 GMT

 ಕೇಪ್‌ಟೌನ್, ಫೆ.23: ನಾಯಕಿ ಹರ್ಮನ್‌ಪ್ರೀತ್ ಕೌರ್ ಅರ್ಧಶತಕದ ಕೊಡುಗೆಯ(52 ರನ್, 34 ಎಸೆತ) ಹೊರತಾಗಿಯೂ ಡಾರ್ಸಿ ಬ್ರೌನ್(2-18) ನೇತೃತ್ವದ ಆಸ್ಟ್ರೇಲಿಯದ ಶಿಸ್ತುಬದ್ದ ಬೌಲಿಂಗ್ ದಾಳಿಗೆ ಕಂಗಾಲಾದ ಭಾರತ ಕ್ರಿಕೆಟ್ ತಂಡ ಮಹಿಳಾ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಮೊದಲ ಸೆಮಿ ಫೈನಲ್‌ನಲ್ಲಿ 5 ರನ್‌ನಿಂದ ಸೋಲುಂಡಿದೆ.

ರೋಚಕ ಗೆಲುವು ದಾಖಲಿಸಿರುವ ಆಸ್ಟ್ರೇಲಿಯ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

 ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 173 ರನ್ ಕಠಿಣ ಗುರಿ ಪಡೆದ ಭಾರತವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 167 ರನ್ ಗಳಿಸಿ ವೀರೋಚಿತ ಸೋಲುಂಡಿತು.

ಔಟಾಗದೆ 20 ರನ್ ಗಳಿಸಿದ ದೀಪ್ತಿ ಶರ್ಮಾ ಗೆಲುವಿನ ಆಸೆ ಮೂಡಿಸಿದರು. ಅಶ್ಲೆ ಗಾರ್ಡನರ್ 2 ವಿಕೆಟ್‌ಗಳನ್ನು ಪಡೆದರು.

Similar News