ಸ್ಥಾಯಿ ಸಮಿತಿ ಚುನಾವಣೆಗಿಂತ ಮೊದಲು ಬಿಜೆಪಿಗೆ ಸೇರಿದ ಕೌನ್ಸಿಲರ್ ಗೆ 'ದೇಶದ್ರೋಹಿ' ಎಂದ ಎಎಪಿ ನಾಯಕರು
Update: 2023-02-24 14:52 IST
ಹೊಸದಿಲ್ಲಿ: ಎಎಪಿ ವಿರುದ್ಧ ಬಂಡಾಯ ಸಾರಿರುವ ಪವನ್ ಸೆಹ್ರಾವತ್ ಶುಕ್ರವಾರ ಎಂಸಿಡಿಯ ಸ್ಥಾಯಿ ಸಮಿತಿಯ ಆರು ಸದಸ್ಯರ ಚುನಾವಣೆಗೆ ಮತದಾನ ಮಾಡುವ ಸಂದರ್ಭದಲ್ಲಿ ತಮ್ಮ ಮಾಜಿ ಸಹೋದ್ಯೋಗಿಗಳಿಂದ ನಿಂದನೆಗೆ ಒಳಗಾದರು. ಅವರಲ್ಲಿ ಹಲವರು ಪವನ್ ರನ್ನು "ದೇಶದ್ರೋಹಿ" ಎಂದು ಕರೆದರು.
ಬವಾನಾದ ಎಎಪಿ ಕೌನ್ಸಿಲರ್ ನಿರ್ಣಾಯಕ ಮುನ್ಸಿಪಲ್ ಹೌಸ್ ಸಭೆಗೆ ಮುಂಚಿತವಾಗಿ ಬಿಜೆಪಿಗೆ ಸೇರ್ಪಡೆಗೊಂಡರು.
ದಿಲ್ಲಿ ಮೇಯರ್ ಶೆಲ್ಲಿ ಒಬೆರಾಯ್ ಅವರ ಆದೇಶದ ಮೇರೆಗೆ ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ (MCD) ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಸ್ಥಾಯಿ ಸಮಿತಿಯ ಆರು ಸದಸ್ಯರನ್ನು ಆಯ್ಕೆ ಮಾಡಲು ಹೊಸ ಚುನಾವಣೆಯನ್ನು ನಡೆಸಲಾಗುತ್ತಿದೆ.
ಬೆಳಗ್ಗೆ 11.15ರ ಸುಮಾರಿಗೆ ಮತದಾನ ಆರಂಭವಾಯಿತು. ಒಬೆರಾಯ್ ಅವರು ಮತಗಟ್ಟೆ ಪ್ರದೇಶಕ್ಕೆ ಮೊಬೈಲ್ ಫೋನ್ ಕೊಂಡೊಯ್ಯುವುದನ್ನು ನಿಷೇಧಿಸಿದ್ದಾರೆ.