ಬಿಜೆಪಿ ಪ್ರತಿಭಟನೆಯಲ್ಲಿ ತಮಿಳುನಾಡು ಸರಕಾರಕ್ಕೆ ಬೆದರಿಕೆ: ಮಾಜಿ ಯೋಧನ ವಿರುದ್ಧ ಪ್ರಕರಣ ದಾಖಲು

Update: 2023-02-24 16:39 GMT

ಚೆನ್ನೈ, ಫೆ. 24: ಬಿಜೆಪಿ ಫೆ. 21ರಂದು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಕರ್ನಲ್ ಪಾಂಡಿಯನ್ ವಿರುದ್ಧ ಚೆನ್ನೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ತಮಿಳುನಾಡು ಸರಕಾರ ಮಾಜಿ ಯೋಧರು ಬಾಂಬ್ ಇರಿಸುವಂತೆ, ಗುಂಡು ಹಾರಿಸುವಂತೆ ಹಾಗೂ ಹೋರಾಡುವಂತೆ ಉತ್ತೇಜಿಸಬಾರದು ಎಂದು ಹೇಳಿಕೆ ನೀಡಿರುವುದಕ್ಕೆ ಚೆನ್ನೈ ಪೊಲೀಸರು ಪಾಂಡಿಯನ್ ವಿರುದ್ಧ ಫೆಬ್ರವರಿ 22ರಂದು ಪ್ರಕರಣ ದಾಖಲಿಸಿದ್ದಾರೆ. 

ಡಿಎಂಕೆ ಕೌನ್ಸಿಲರ್ ಹಾಗೂ ಅವರ ಪುತ್ರ ಯೋಧ ಪ್ರಭು (28) ಎಂಬವರನ್ನು ಹತ್ಯೆಗೈದಿರುವುದನ್ನು ಖಂಡಿಸಿ ಬಿಜೆಪಿ ಆಯೋಜಿಸಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಆದರೆ, ಪಾಂಡಿಯನ್ ಅವರನ್ನು ಇದುವರೆಗೆ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 

Similar News