×
Ad

ಜೋಯಾಲುಕ್ಕಾಸ್‌ನ 305 ಕೋ.ರೂ. ಮೌಲ್ಯದ ಸೊತ್ತು ವಶ

Update: 2023-02-24 22:34 IST

ಹೊಸದಿಲ್ಲಿ, ಫೆ. 24: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಎಫ್ಇಎಂಎ)ಯ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಕೇರಳ ಮೂಲದ ಜುವೆಲ್ಲರಿ ಸಮೂಹ ಜೋಯಾಲುಕ್ಕಾಸ್‌ನ 305.84 ಕೋ.ರೂ. ಮೌಲ್ಯದ ಸೊತ್ತನ್ನು ಜಾರಿ ನಿರ್ದೇಶನಾಲಯ ಶುಕ್ರವಾರ ವಶಪಡಿಸಿಕೊಂಡಿದೆ. ಜಾರಿ ನಿರ್ದೇಶನಾಲಯ ಫೆಬ್ರವರಿ 22ರಂದು ಜೋಯಾಲುಕ್ಕಾಸ್ ಸಮೂಹದ ಹಲವು ಕಚೇರಿಗಳಲ್ಲಿ ದಾಳಿ ನಡೆಸಿತ್ತು. ಜೋಯಾಲುಕ್ಕಾಸ್ ಸಮೂಹ 2,300 ಕೋ. ರೂ. ಐಪಿಒವನ್ನು ಹಿಂಪಡೆದ ಬಳಿಕ ಈ ದಾಳಿ ನಡೆದಿದೆ.

ವರ್ಗೀಸ್ ಅವರ ವಿರುದ್ಧದ ಈ ಪ್ರಕರಣ ಹವಾಲ ಮಾರ್ಗಗಗಳ ಮೂಲಕ ಭಾರತದಿಂದ ದುಬೈಗೆ ಗಮನಾರ್ಹ ಪ್ರಮಾಣದ ನಗದನ್ನು ವಾರ್ಗಯಿಸಿರುವುದಕ್ಕೆ ಸಂಬಂಧಿಸಿದೆ. ಅನಂತರ ಈ ಹಣವನ್ನು ಜೋಯಾಲುಕ್ಕಾಸ್ ಜುವೆಲ್ಲರಿ ಎಲ್ಎಲ್ಸಿಯಲ್ಲಿ ಹೂಡಿಕೆ ಮಾಡಲಾಗಿತ್ತು ಎಂದು ಹೇಳಲಾಗಿದೆ. ಅಧಿಕೃತ ದಾಖಲೆಗಳು, ಇಮೇಲ್ಗಳು ಸೇರಿದಂತೆ ಶೋಧದ ಮೂಲಕ ಸಂಗ್ರಹಿಸಲಾದ ಪುರಾವೆಗಳು ಹವಾಲ ವರ್ಗಾವಣೆಯಲ್ಲಿ ವರ್ಗೀಸ್ ಅವರು ಸಕ್ರೀಯವಾಗಿ ಭಾಗಿಯಾಗಿದ್ದಾರೆ ಎಂಬುದನ್ನು ತೋರಿಸಿ ಕೊಟ್ಟಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೆಯಲ್ಲಿ ತಿಳಿಸಿದೆ.

Similar News