ಇಂದು ಕಾಂಗ್ರೆಸ್ ಅಧಿವೇಶನದಲ್ಲಿ ಸೋನಿಯಾ ಗಾಂಧಿ ಭಾಷಣ, 3 ನಿರ್ಣಯಗಳ ಬಗ್ಗೆ ಚರ್ಚೆ

Update: 2023-02-25 04:30 GMT

ನವ ರಾಯ್‌ಪುರ(ಛತ್ತೀಸ್‌ಗಢ): ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ(Sonia Gandhi) ಅವರು ಛತ್ತೀಸ್‌ಗಢದಲ್ಲಿ ನಾಯಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜೊತೆಗೆ ರಾಜಕೀಯ, ಆರ್ಥಿಕ ಮತ್ತು ಅಂತರಾಷ್ಟ್ರೀಯ ವ್ಯವಹಾರಗಳ ನಿರ್ಣಯಗಳನ್ನು ಇಂದು ಪಕ್ಷದ 85 ನೇ ಅಧಿವೇಶನದಲ್ಲಿ ಚರ್ಚಿಸಲಾಗುವುದು.

ಮೂರು ದಿನಗಳ ಸಮಾವೇಶದ ಎರಡನೇ ದಿನದ ಆರಂಭದಲ್ಲಿ  ಕಾಂಗ್ರೆಸ್ ಅಧ್ಯಕ್ಷರು ಪುಸ್ತಕವನ್ನು ಬಿಡುಗಡೆ ಮಾಡುತ್ತಾರೆ ಹಾಗೂ  ಪಕ್ಷದ ಪ್ರಧಾನ ಕಾರ್ಯದರ್ಶಿಗಳು ತಮ್ಮ ವರದಿಗಳನ್ನು ಸಲ್ಲಿಸುತ್ತಾರೆ.

ಬಳಿಕ  ಖರ್ಗೆ ಅವರು  ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ "ಧನ್ಯವಾದ" ಹೇಳಿಕೆಯನ್ನು ಸಹ ಅಧಿವೇಶನದಲ್ಲಿ ಓದಲಾಗುತ್ತದೆ. ನಂತರ ಅವರು ತಮ್ಮ ಭಾಷಣವನ್ನು ಮಾಡುತ್ತಾರೆ.

ಪಕ್ಷವು ಹಂಚಿಕೊಂಡ ಕಾರ್ಯಕ್ರಮದ ಪ್ರಕಾರ ಪ್ರತಿನಿಧಿಗಳು ರಾಜಕೀಯ, ಆರ್ಥಿಕ  ಹಾಗೂ ಅಂತರಾಷ್ಟ್ರೀಯ ವ್ಯವಹಾರಗಳ ನಿರ್ಣಯಗಳ ಮೇಲೆ ಚರ್ಚಿಸುತ್ತಾರೆ.

ಅಧಿವೇಶನದ ಮೊದಲ ದಿನದಂದು ಕಾಂಗ್ರೆಸ್ ಸ್ಟೀರಿಂಗ್ ಕಮಿಟಿಯು ಸಿಡಬ್ಲ್ಯೂಸಿಗೆ ಚುನಾವಣೆಗಳನ್ನು ನಡೆಸದಿರಲು ಸರ್ವಾನುಮತದಿಂದ ನಿರ್ಧರಿಸಿತು. ಅದರ ಸದಸ್ಯರನ್ನು ನಾಮನಿರ್ದೇಶನ ಮಾಡಲು ಪಕ್ಷದ ಮುಖ್ಯಸ್ಥರಿಗೆ ಅಧಿಕಾರ ನೀಡಿತು.

Similar News