ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ ಅರವಿಂದ ಕೇಜ್ರಿವಾಲ್‌-ಉದ್ಧವ್‌ ಠಾಕ್ರೆ ಭೇಟಿ

Update: 2023-02-25 05:29 GMT

ಮುಂಬೈ:   ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್(Arvind Kejriwal) ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ(Uddhav Thackeray)ಶುಕ್ರವಾರ ಮುಂಬೈನಲ್ಲಿ ಭೇಟಿಯಾಗಿ "ದೇಶದ ಪರಿಸ್ಥಿತಿ" ಕುರಿತು ಚರ್ಚಿಸಿದರು.

ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದರಾದ ರಾಘವ್ ಚಡ್ಡಾ ಹಾಗೂ  ಸಂಜಯ್ ಸಿಂಗ್ ಅವರು ಶುಕ್ರವಾರ  ಸಂಜೆ ಸೌಜನ್ಯದ ಭೇಟಿಗಾಗಿ  ಠಾಕ್ರೆ ಅವರ ಮುಂಬೈ ನಿವಾಸ ಮಾತೋಶ್ರೀಗೆ ತಲುಪಿದರು.

"ನಾವು ಅರವಿಂದ ಜೀ ಅವರನ್ನು ಸ್ವಾಗತಿಸಿದ್ದೇವೆ ಹಾಗೂ  ನಮ್ಮ ದೇಶವನ್ನು ಬಲಿಷ್ಠಗೊಳಿಸಲು ನಾವು ಏನು ಮಾಡಬಹುದು ಎಂದು ಚರ್ಚಿಸಿದ್ದೇವೆ. ನಮ್ಮೆಲ್ಲರಿಗೂ ಕೇವಲ ಸಿದ್ಧಾಂತವಿದೆ.  ದೇಶವನ್ನು ಬಲಿಷ್ಠಗೊಳಿಸುವುದು ಹೇಗೆಂದು ಚರ್ಚಿಸಬೇಕಾಗಿದೆ" ಎಂದು ಠಾಕ್ರೆ ಹೇಳಿದರು.

ನಾವು  ಇಂದಿನ "ದೇಶದ ಪರಿಸ್ಥಿತಿ" ಕುರಿತು ಚರ್ಚಿಸಿದ್ದೇವೆ ಎಂದು ಕೇಜ್ರಿವಾಲ್ ಭೇಟಿ ಬಳಿಕ ಹೇಳಿದರು.

"ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಅವರು ಮನೆಯಿಂದ ಮನೆಗೆ ಹೊರಗೆ ತಿರುತ್ತಿದ್ದಾರೆ. ಹಣದುಬ್ಬರವು ಜನರ ಆದಾಯವನ್ನು ತಿಂದಿದೆ, ಆದರೂ ಆದಾಯ ಹೆಚ್ಚಾಗುತ್ತಿಲ್ಲ, ವೆಚ್ಚಗಳು ಮಾತ್ರ ಹೆಚ್ಚಾಗುತ್ತಿವೆ" ಎಂದು ಕೇಜ್ರಿವಾಲ್ ಹೇಳಿದರು.

Similar News