×
Ad

ಚಂದ್ರಶೇಖರ ಕೆದ್ಲಾಯರ ನೆನಪಿನಲ್ಲಿ ಒಂದು ಸಂಜೆ ಕಾರ್ಯಕ್ರಮ

Update: 2023-02-25 20:19 IST

ಉಡುಪಿ: ಜಿಲ್ಲಾ ಮತ್ತು ತಾಲೂಕು ಗಮಕ ಪರಿಷತ್ತು, ಎಂಜಿಎಂ ಕಾಲೇಜು, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಎಂ.ಗೋಪಾಲಕೃಷ್ಣ ಅಡಿಗ ಟ್ರಸ್ಟ್, ಹಿರಿಯಡಕ ಸಂಸ್ಕೃತಿ ಸಿರಿ ಟ್ರಸ್ಟ್ ವತಿಯಿಂದ ದಿ.ಚಂದ್ರಶೇಖರ ಕೆದ್ಲಾಯ ಅವರ ನೆನಪಿನಲ್ಲಿ ಒಂದು ಸಂಜೆ ‘ಹಕ್ಕಿ ಹಾರಿ ಹೋಯಿತು’ ಕಾರ್ಯಕ್ರಮ ಎಂಜಿಎಂ  ಗೀತಾಂಜಲಿ ಸಭಾಂಗಣದಲ್ಲಿ ಶನಿವಾರ ಜರಗಿತು.

ನಿವೃತ್ತ ಶಿಕ್ಷಕ ಎಸ್.ವಿ.ಭಟ್ ಮತ್ತು ಪಲ್ಲವಿ ತುಂಗ ನುಡಿನಮನ ಸಲ್ಲಿಸಿದರು. ಅಧ್ಯಕ್ಷತೆಯನ್ನು ವಿದ್ವಾಂಸ ಪ್ರೊ.ಎಂ.ಎಲ್.ಸಾಮಗ ವಹಿಸಿದ್ದರು. ಪ್ರಾಂಶು ಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ, ಎಂ. ಗೋಪಾಲಕೃಷ್ಣ ಅಡಿಗ ಟ್ರಸ್ಟ್‌ನ ಜಯರಾಮ ಅಡಿಗ, ರಾ.ಗೋ.ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು.

ಶ್ರಾವ್ಯಾ ಬಾಸ್ರಿ, ಪಲ್ಲವಿ ತುಂಗ, ನಟರಾಜ್ ಎಚ್.ಎಸ್.ಭಾವಗೀತೆ ಹಾಡಿದರು. ಮಂಜುಳಾ ಸುಬ್ರಹ್ಮಣ್ಯ ಮಂಚಿ, ಡಾ.ರಾಘವೇಂದ್ರ ರಾವ್ ಗಮಕ ಪ್ರಸ್ತುತಪಡಿಸಿದರು.

Similar News