ಮಾ.3ಕ್ಕೆ ಮಣಿಪಾಲದಲ್ಲಿ ಅಂ.ರಾ. ಪ್ರಸಿದ್ಧಿಯ ಪ್ರೊ.ಅರ್ಥರ್ ಬೆಂಜಮಿನ್‌ರಿಂದ ಮ್ಯಾತ್ಸ್ ಶೋ
ಮಣಿಪಾಲ, ಫೆ.25: ಅಂತಾರಾಷ್ಟ್ರೀಯ ಖ್ಯಾತಿಯ ‘ಮೆಥಮೆಜಿಷಿಯನ್’ ಪ್ರೊ.ಅರ್ಥರ್ ಬೆಂಜಮಿನ್ ತನ್ನ ಪ್ರದರ್ಶನ (ಶೋ)ದೊಂದಿಗೆ ಮಾ.3ರಂದು ಮಣಿಪಾಲಕ್ಕೆ ಆಗಮಿಸಲಿದ್ದಾರೆ. ಅಂದು ಸಂಜೆ 4:00ಗಂಟೆಗೆ ಅವರ ಆಕರ್ಷಕ ಮೆಥಮ್ಯಾಜಿಕ್ ಶೋ ಮಣಿಪಾಲದ ಎಂಐಟಿಯ ಕ್ವಾಡ್ರಾಂಗಲ್‌ನಲ್ಲಿ ನಡೆಯಲಿದೆ.
ಮೆಥಮೆಜಿಷಿಯನ್ ಎಂದೇ ವಿಶ್ವದಾದ್ಯಂತ ಕರೆಸಿಕೊಳ್ಳುವ ಡಾ. ಅರ್ಥರ್ ಬೆಂಜಮಿನ್ ಗಣಿತದ ರಹಸ್ಯ ಹಾಗೂ ಸೌಂದರ್ಯವನ್ನು ಬಿಡಿಸುವುದರಲ್ಲಿ ತಜ್ಞರಿದ್ದು, ತಮ್ಮ ಆಕರ್ಷಕ ಪ್ರದರ್ಶನದ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸುತ್ತಾರೆ.
ಮಣಿಪಾಲದ ಎಂಐಟಿಯಲ್ಲಿ ಅವರು ಸಂಸ್ಥೆಯ ಗಣಿತ ವಿಭಾಗ ಅಭಿವೃದ್ಧಿ ಪಡಿಸಿ ವಿನ್ಯಾಸಗೊಳಿಸಿದ ವಿಶಿಷ್ಟ ಬಿ.ಟೆಕ್(ಮೆಥಮ್ಯಾಟಿಕ್ ಮತ್ತು ಕಂಪ್ಯೂಟಿಂಗ್) ಪ್ರೋಗ್ರಾಮ್‌ನ್ನು ಅನಾವರಣಗೊಳಿಸಲಿದ್ದಾರೆ. ಈ ಪ್ರೋಗ್ರಾಮ್‌ನ್ನು ಇನ್‌ಫೋಸಿಸ್, ಮಣಿಪಾಲ ಡಾಟ್‌ನೆಟ್ ಮುಂತಾದ ಉದ್ದಿಮೆಗಳೊಂದಿಗೆ ಚರ್ಚಿಸಿ, ಸಮಾಲೋಚನೆ ನಡೆಸಿ ವಿನ್ಯಾಸ ಗೊಳಿಸಲಾಗಿದೆ. ಈಗಿನ ಉದ್ದಿಮೆಗಳ ಕಂಪ್ಯೂಟಿಂಗ್ ಅಗತ್ಯಕ್ಕನುಗುಣವಾಗಿ ಈ ಪ್ರೋಗ್ರಾಮ್‌ನ್ನು ವಿನ್ಯಾಸಗೊಳಿಸಲಾಗಿದೆ ಎಂದು ಎಂಐಟಿ ಪ್ರಕಟಣೆ ತಿಳಿಸಿದೆ.