ಎನ್ಇಪಿ ಭವಿಷ್ಯದ ಬೇಡಿಕೆಗೆ ಅನುಗುಣವಾಗಿ ಶಿಕ್ಷಣ ವ್ಯವಸ್ಥೆಗೆ ಹೊಸ ರೂಪ ನೀಡಿದೆ: ಪ್ರಧಾನಿ ಮೋದಿ
Update: 2023-02-25 21:46 IST
ಹೊಸದಿಲ್ಲಿ,ಫೆ.25: ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)ಯು ಭವಿಷ್ಯದ ಬೇಡಿಕೆಗಳಿಗೆ ಅನುಗುಣವಾಗಿ ದೇಶದ ಶಿಕ್ಷಣ ವ್ಯವಸ್ಥೆಗೆ ಹೊಸ ರೂಪವನ್ನು ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಇಲ್ಲಿ ಹೇಳಿದರು.
ಬಜೆಟೋತ್ತರ ವೆಬಿನಾರ್ ಉದ್ದೇಶಿಸಿ ಮಾತನಾಡಿದ ಮೋದಿ,ಈ ಹಿಂದೆ ಶಿಕ್ಷಣ ವ್ಯವಸ್ಥೆಯು ಕಟ್ಟುನಿಟ್ಟಿನ ಬಲಿಪಶುವಾಗಿತ್ತು. ಆದರೆ ಎನ್ಇಪಿಯು ನಮ್ಯತೆಯನ್ನು ತಂದಿದೆ ಮತ್ತು ಭವಿಷ್ಯದ ಬೇಡಿಕೆಗಳಿಗೆ ಅನುಗುಣವಾಗಿ ಅದನ್ನು ಮರುಹೊಂದಿಸಿದೆ ಎಂದರು. 2023-24ನೇ ಸಾಲಿನ ಕೇಂದ್ರ ಮುಂಗಡಪತ್ರದಲ್ಲಿನ ಪ್ರಕಟಣೆಗಳನ್ನು ಪಟ್ಟಿ ಮಾಡಿದ ಅವರು,ಭಾರತವನ್ನು ವಿಶ್ವದ ಕೌಶಲ್ಯ ರಾಜಧಾನಿಯನ್ನಾಗಿ ಮಾಡಲು ಮಾರ್ಗಸೂಚಿಯನ್ನು ವಿವರಿಸಿದರು.