ಮೈದಾನದಲ್ಲೇ ತೀವ್ರ ಹೃದಯಾಘಾತದಿಂದ ಕ್ರಿಕೆಟಿಗ ಮೃತ್ಯು
Update: 2023-02-26 10:50 IST
ಅಹಮದಾಬಾದ್: ಆಘಾತಕಾರಿ ಘಟನೆಯೊಂದರಲ್ಲಿ 34 ವರ್ಷದ ಕ್ರಿಕೆಟಿಗರೊಬ್ಬರು ಅಹಮದಾಬಾದ್ ಬಳಿ ಮೈದಾನದಲ್ಲಿಯೇ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ವಸಂತ್ ರಾಥೋಡ್ ಅವರು ರಾಜ್ಯ ಸರಕು ಹಾಗೂ ಸೇವಾ ತೆರಿಗೆ (SGST) ಇಲಾಖೆಯಲ್ಲಿ ಹಿರಿಯ ಗುಮಾಸ್ತರಾಗಿದ್ದರು.
ರಾಥೋಡ್ ಬೌಲಿಂಗ್ ಮಾಡುವಾಗ ತೀವ್ರ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದರು. ತಕ್ಷಣ ಅವರನ್ನು ಸೋಲಾ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಅವರು ಕೊನೆಯುಸಿರೆಳೆದರು.
ಗುಜರಾತ್‌ನಲ್ಲಿ 10 ದಿನಗಳೊಳಗೆ ನಡೆದ ಇಂತಹ ಮೂರನೇ ಘಟನೆ ಇದಾಗಿದೆ.