ಈರುಳ್ಳಿ ರಫ್ತು ನಿಷೇಧಕ್ಕೆ ಕೇಂದ್ರ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ, ಹೇಳಿಕೆಗಳು ದುರದೃಷ್ಟಕರ: ವಾಣಿಜ್ಯ ಸಚಿವಾಲಯ
ಹೊಸದಿಲ್ಲಿ: ಈರುಳ್ಳಿ ರಫ್ತಿಗೆ ಯಾವುದೇ ನಿಷೇಧವಿಲ್ಲ ಮತ್ತು 2022 ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಭಾರತವು 523.8 ಮಿಲಿಯನ್ USD ಮೌಲ್ಯದ ಸರಕುಗಳನ್ನು ರವಾನಿಸಿದೆ ಎಂದು ವಾಣಿಜ್ಯ ಸಚಿವಾಲಯ ರವಿವಾರ ತಿಳಿಸಿದೆ. ಈರುಳ್ಳಿ ಬೀಜದ ರಫ್ತು ಮಾತ್ರ ನಿರ್ಬಂಧಿಸಲಾಗಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
"ಸರ್ಕಾರವು ಈರುಳ್ಳಿ ರಫ್ತು ನಿರ್ಬಂಧಿಸಿಲ್ಲ ಅಥವಾ ನಿಷೇಧಿಸಿಲ್ಲ" ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಡಿಸೆಂಬರ್ 2022 ರಲ್ಲಿ, ಈರುಳ್ಳಿ ರಫ್ತು ಸುಮಾರು ಶೇಕಡಾ 50 ರಷ್ಟು ಏರಿಕೆಯಾಗಿ USD 52.1 ಮಿಲಿಯನ್‌ಗೆ ತಲುಪಿದೆ. ಈ ಹಣಕಾಸು ವರ್ಷದಲ್ಲಿ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ರಫ್ತು ಶೇ.16.3ರಷ್ಟು ಏರಿಕೆಯಾಗಿ 523.8 ಮಿಲಿಯನ್ ಡಾಲರ್‌ಗೆ ತಲುಪಿದೆ.
ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಶನಿವಾರ ಟ್ವೀಟ್‌ನಲ್ಲಿ "ಭಾರತದಿಂದ ಯಾವುದೇ ದೇಶಕ್ಕೆ ಈರುಳ್ಳಿ ರಫ್ತಿನ ಮೇಲೆ ಯಾವುದೇ ನಿಷೇಧವಿಲ್ಲ ಮತ್ತು ಇದಕ್ಕೆ ವಿರುದ್ಧವಾಗಿ ಸೂಚಿಸುವ ತಪ್ಪುದಾರಿಗೆಳೆಯುವ ಹೇಳಿಕೆಗಳು ದುರದೃಷ್ಟಕರ" ಎಂದು ಹೇಳಿದ್ದಾರೆ.
ಫೆಬ್ರವರಿ 25 ರಂದು ಈರುಳ್ಳಿ ರಫ್ತಿನ ಕುರಿತು ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಮಾಡಿದ ಟ್ವೀಟ್ ನಂತರ ಈ ಹೇಳಿಕೆ ಬಂದಿದೆ.
There is no ban on onion exports from India to any country and misleading statements suggesting the contrary is unfortunate.
— Piyush Goyal (@PiyushGoyal) February 25, 2023
Infact, from July-December 2022, onion exports have consistently been above the $40 million mark every month, benefiting our Annadatas. https://t.co/tGzwVHCt9J