×
Ad

ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿಗೆ 3 ರ‍್ಯಾಂಕ್‌

Update: 2023-02-26 21:22 IST

ಮಂಗಳೂರು, ಫೆ.26: ಬೆಳಗಾವಿಯ ವಿಶ್ವೇಶ್ವರಯ್ಯ ಟೆಕ್ನಾಲಾಜಿಕಲ್ ಯೂನಿವರ್ಸಿಟಿ ನಡೆಸಿದ 2021-22ನೇ ಸಾಲಿನ ವಿಶ್ವವಿದ್ಯಾಲಯ ಪರೀಕ್ಷೆಯಲ್ಲಿ ನಗರದ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ (ಎಸ್‌ಜೆಇಸಿ) ವಿದ್ಯಾರ್ಥಿಗಳು ಮೂರು ರ‍್ಯಾಂಕ್‌ ಗಳಿಸಿದ್ದಾರೆ.

ಸಿಮೊನೆ ಎಲ್ ಪಿಂಟೊ 9.6 ಸಿ.ಜಿ.ಪಿ.ಎ ಗಳಿಸುವ ಮೂಲಕ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್‌ನಲ್ಲಿ 2ನೇ ರ‍್ಯಾಂಕ್‌ ಪಡೆದಿದ್ದಾರೆ. ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಓವಿನ್ ಆರ್.ರೊಡ್ರಿಗಸ್ 9.61 ಸಿ.ಜಿ.ಪಿ.ಎ ಗಳಿಸಿ 4ನೇ ರ‍್ಯಾಂಕ್‌ ಗಳಿಸಿದ್ದಾರೆ ಮತ್ತು ಕಂಪ್ಯೂಟರ್ ಅಪ್ಲಿಕೇಶನ್ಸ್ ಭಾಗದ ಸ್ನಾತಕೋತ್ತರ ಪದವಿಯಲ್ಲಿ ಅಫ್ರಾತ್ ಅಮನ್ 9.36 ಸಿ.ಜಿ.ಪಿ.ಎ ಗಳಿಸಿ 10ನೇ ರ‍್ಯಾಂಕ್‌ ಪಡೆದಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Similar News