×
Ad

ವಿವಾಹ ಸಮಾರಂಭದಲ್ಲಿ ನೃತ್ಯ ಮಾಡುತ್ತಿದ್ದ 19 ವರ್ಷದ ಯುವಕ ಕುಸಿದು ಮೃತ್ಯು

Update: 2023-02-27 12:08 IST

ಹೈದರಾಬಾದ್: ಸಂಬಂಧಿಕರ ವಿವಾಹ ಸಮಾರಂಭದಲ್ಲಿ ದಿಢೀರನೆ ಕುಸಿದು ಬಿದ್ದು 19 ವರ್ಷದ ಯುವಕನೊಬ್ಬ ಮೃತಪಟ್ಟಿರುವ ಘಟನೆ ಹೈದರಾಬಾದ್‌ನಿಂದ 200 ಕಿಮೀ ದೂರವಿರುವ ನಿರ್ಮಲ್ ಜಿಲ್ಲೆಯಲ್ಲಿ ಸಂಭವಿಸಿದೆ ಎಂದು India today.in ವರದಿ ಮಾಡಿದೆ. ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಮಹಾರಾಷ್ಟ್ರದ ನಿವಾಸಿಯಾದ ಮುತ್ಯಂ ಎಂಬ ಯುವಕ ತನ್ನ ಸಂಬಂಧಿಕರ ವಿವಾಹ ಸಂದರ್ಭದಲ್ಲಿ ನೃತ್ಯ ಮಾಡುವಾಗ ದಿಢೀರನೆ ಕುಸಿದು ಬಿದ್ದು, ಪ್ರಜ್ಞಾಹೀನನಾಗಿದ್ದಾನೆ.

ಸಂಭ್ರಮದಲ್ಲಿದ್ದ ಆತ ಅತಿಥಿಗಳೆದುರು ಜನಪ್ರಿಯ ಹಾಡೊಂದಕ್ಕೆ ಹೆಜ್ಜೆ ಹಾಕುತ್ತಿದ್ದ. ಕುಸಿದು ಬಿದ್ದ ಆತನನ್ನು ಕೂಡಲೇ ಅತಿಥಿಗಳು ಆತನನ್ನು ಬೈಂಸಾ ಪ್ರದೇಶದ ಆಸ್ಪತ್ರೆಗೆ ಸಾಗಿಸಿದರಾದರೂ, ವೈದ್ಯರು ಆತ ಆಸ್ಪತ್ರೆಗೆ ಬರುವ ಮುನ್ನವೇ ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದ್ದಾರೆ.

ಕೊರೋನ ಸಾಂಕ್ರಾಮಿಕದ ನಂತರ ಯುವಕರಲ್ಲಿ ದಿಢೀರ್ ಹೃದಯಾಘಾತಗಳು ಸರಣಿಯೋಪಾದಿ ಸಂಭವಿಸುತ್ತಿದ್ದು, ವೈದ್ಯಕೀಯ ತಜ್ಞರು ಈ ಕುರಿತು ಹೆಚ್ಚಿನ ಸಂಶೋಧನೆ ನಡೆಯಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಸಾಂಪ್ರದಾಯಿಕ ವಿಧಿವಿಧಾನಗಳನ್ನು ಪೂರೈಸಲು ಪ್ರಪ್ರಥಮ ಬಾರಿಗೆ ಯಾಂತ್ರಿಕ ಆನೆಯನ್ನು ನಿಯೋಜಿಸಿದ ಕೇರಳ ದೇವಾಲಯ

Similar News