ಕಾರ್ಕಳ: ಟಿಪ್ಪರಿನಲ್ಲಿ ಬಂದು ಜ್ಯುವೆಲ್ಲರಿಗೆ ನುಗ್ಗಿ ಬೆಳ್ಳಿಯ ಆಭರಣ ಕಳವು!
ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿ
Update: 2023-02-27 20:30 IST
ಕಾರ್ಕಳ, ಫೆ.27: ಟಿಪ್ಪರ್‌ನಲ್ಲಿ ಆಗಮಿಸಿ ಜ್ಯುವೆಲ್ಲರಿಗೆ ನುಗ್ಗಿದ ಕಳ್ಳರು, ಸಾವಿರಾರು ರೂ. ಮೌಲ್ಯದ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿರುವ ಘಟನೆ ಫೆ.27ರಂದು ಬೆಳಗಿನ ಜಾವ 1.30ರ ಸುಮಾರಿಗೆ ನಿಟ್ಟೆ ಗ್ರಾಮದ ಫಾರೆವರ್ ಹೋಟೇಲ್ ಬಳಿ ನಡೆದಿದೆ.
ಬೆಳಗಿನ ಜಾವ 1:30 ಗಂಟೆಯಿಂದ 2:00 ಗಂಟೆಯ ನಡುವಿನ ಅವಧಿಯಲ್ಲಿ ಕೆಎ19 ಎನ್5279 ನಂಬರಿನ ಟಿಪ್ಪರ್‌ನಲ್ಲಿ ಬಂದ ಕಳ್ಳರು, ಆರಾಧ್ಯ ಜುವೆಲ್ಲರ್ ಅಂಗಡಿಯ ಶಟರ್‌ನ ಬೀಗ ಮುರಿದು ಒಳನುಗ್ಗಿದರು. ಬಳಿಕ ಶೋಕಸ್‌ನಲ್ಲಿಟ್ಟಿದ್ದ ಸುಮಾರು 20,000 ರೂ. ಮೌಲ್ಯದ ಸುಮಾರು 260 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಟಿಪ್ಪರ್‌ನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.