ಮಲ್ಪೆ ಬೀಚ್‌ನಲ್ಲಿ ಮುಳುಗುತ್ತಿದ್ದ ಯುವಕನ ರಕ್ಷಣೆ
Update: 2023-02-27 20:38 IST
ಮಲ್ಪೆ, ಫೆ.27: ಮಲ್ಪೆ ಬೀಚಿನ ಸಮುದ್ರದಲ್ಲಿ ಮುಳುಗುತ್ತಿದ್ದ ಬಿಹಾರ ಮೂಲದ ಯುವಕನೋರ್ವನನ್ನು ರಕ್ಷಿಸಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ರಕ್ಷಿಸಲ್ಪಟ್ಟ ಯುವಕನನ್ನು ಬಿಹಾರದ ಜಿತೇಂದ್ರ(27) ಎಂದು ಗುರುತಿಸ ಲಾಗಿದೆ.
ನೀರಿನಲ್ಲಿ ಮುಳುಗುತ್ತಿದ್ದ ಈತನನ್ನು ಜೀವರಕ್ಷಕ ದಳ ಮತ್ತು ಮುಳುಗು ತಜ್ಞ ಈಶ್ವರ ಮಲ್ಪೆತಕ್ಷಣವೇ ರಕ್ಷಿಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಆ ವ್ಯಕ್ತಿ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ