ಪಂಜಾಬ್‌ ಕಾಂಗ್ರೆಸ್ ಮುಖಂಡನನ್ನು ಗುಂಡಿಕ್ಕಿ ಹತ್ಯೆಗೈದ ಮಹಿಳೆ!

Update: 2023-02-27 18:12 GMT

ಪಟಿಯಾಲಾ: ಪಂಜಾಬ್‌ ನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎನ್ನುವುದನ್ನು ಸೂಚಿಸುವಂತೆ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ಮತ್ತು ಕಾಂಗ್ರೆಸ್ ಮುಖಂಡ ಮೇಜರ್ ಸಿಂಗ್ ಧರಿವಾಲ್ ರನ್ನು ಇಂದು ಹಾಡುಹಗಲೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ.

ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ತರ್ನ್ ತರಣ್, "ಗುರ್ಮೀತ್ ಚೌಹಾಣ್ ಮಹಿಳೆ ಧಲಿವಾಲ್ ಅವರೊಂದಿಗೆ ಸಂಬಂಧ ಹೊಂದಿದ್ದು, ಕೆಲವು ವೈಯಕ್ತಿಕ ಕಾರಣಗಳಿಂದ ಅವರನ್ನು ಕೊಂದಿದ್ದಾರೆ" ಎಂದು ಹೇಳಿದ್ದಾರೆ.

ಗಡಿಭಾಗದ ಸಾಂಗ್ವಾ ಗ್ರಾಮದಲ್ಲಿ ಕಾಂಗ್ರೆಸ್ ನಾಯಕನ ಮಾಲಕತ್ವದ ಮದುವೆಯ ಹಾಲ್ ಬಳಿ ಮಹಿಳೆ ಹಲವು ಬಾರಿ ಅವರನ್ನು ಗುರಿಯಾಗಿಸಿ ಗುಂಡು ಹಾರಿಸಿದ್ದಾಳೆ. ಎರಡು ಗುಂಡುಗಳು ತಗುಲಿದ ಪರಿಣಾಮ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Similar News