ಗುರ್ಮೀತ್ ಸಿಂಗ್ ಕುಖ್ಯಾತ ಅಪರಾಧಿ ಅಲ್ಲ: ಡೇರಾ ಸಚ್ಚಾ ಮುಖ್ಯಸ್ಥನನ್ನು ಸಮರ್ಥಿಸಿಕೊಂಡ ಹರ್ಯಾಣ ಬಿಜೆಪಿ ಸರ್ಕಾರ
ಚಂಡೀಗಢ: ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮೀತ್ ಸಿಂಗ್ (Dera Sacha Sauda chief Gurmeet Singh) ಕುಖ್ಯಾತ ಅಪರಾಧಿ ಅಲ್ಲ. ಅವರು ಶಿಕ್ಷೆಗೆ ಒಳಗಾಗಿರುವ ಎರಡು ಹತ್ಯೆ ಪ್ರಕರಣಗಳನ್ನು ಸರಣಿ ಹತ್ಯೆ ಎಂದು ಪರಿಗಣಿಸಲಾಗದು ಎಂದು ಹರ್ಯಾಣ ಸರ್ಕಾರ ಪ್ರತಿಪಾದಿಸಿದೆ. ಜೈಲಿನಲ್ಲಿರುವ ಸಿಂಗ್‍ಗೆ 40 ದಿನಗಳ ಪೆರೋಲ್ ಮಂಜೂರು ಮಾಡಿರುವ ಜನವರಿ 21ರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಸರ್ಕಾರ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
"ಈ ಪ್ರಕರಣಗಳಲ್ಲಿ ಇತರ ಸಹ ಆರೋಪಿಗಳ ಜತೆಗೆ ಅಪರಾಧ ಪಿತೂರಿಯಲ್ಲಿ ಶಾಮೀಲಾದ ಆರೋಪವನ್ನು ಸಿಂಗ್ ವಿರುದ್ಧ ಹೊರಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ ಅಡಿಯಲ್ಲಿ, ಸೆಕ್ಷನ್ 120-ಬಿ ಸಹಾಯದಿಂದ ಶಿಕ್ಷೆ ವಿಧಿಸಲಾಗಿದೆ. ಸೆಕ್ಷನ್ 120-ಬಿ ಸ್ವತಂತ್ರ್ಯ ಅಪರಾಧ. ಈ ಸೆಕ್ಷನ್ ಅಡಿಯಲ್ಲಿ ಸ್ವತಂತ್ರವಾಗಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಶಿಕ್ಷೆಯಾದ ಸಂದರ್ಭದಲ್ಲಿ, ವಾಸ್ತವ ಅಪರಾಧ ಕೃತ್ಯದ ಜತೆಗೆ ಶಿಕ್ಷೆಯನ್ನು ಪರಗಣಿಸಬೇಕು" ಎಂದು ರಾಜ್ಯ ಸರ್ಕಾರ ಪಂಜಾಬ್- ಹರ್ಯಾಣ ಹೈಕೋರ್ಟ್‍ಗೆ ಹೇಳಿಕೆ ಸಲ್ಲಿಸಿದೆ.
ಈ ಎರಡೂ ಪ್ರಕರಣಗಳಲ್ಲೂ ಗುರ್ಮೀತ್ ಸಿಂಗ್ ಹಂತಕ ಎನ್ನುವುದು ಸಾಬೀತಾಗಿಲ್ಲ ಎಂದು ಸರ್ಕಾರ ಪ್ರತಿಪಾದಿಸಿದೆ. ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಗುರ್ಮೀತ್ ಸಿಂಗ್ 10 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದು, ಡೇರಾ ಮಾಜಿ ವ್ಯವಸ್ಥಾಪಕ ರಂಜೀತ್ ಸಿಂಗ್ ಮತ್ತು ಪತ್ರಕರ್ತ ರಾಮಚಂದ್ರ ಛತ್ರಪತಿ ಹತ್ಯೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಇದನ್ನೂ ಓದಿ: ಆಪ್ ತೊರೆದು ಬಿಜೆಪಿ ಸೇರ್ಪಡೆಯಾದ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್