×
Ad

ಭೋಪಾಲ್-ಉಜ್ಜಯಿನಿ ರೈಲು ಸ್ಫೋಟ ಪ್ರಕರಣ: 8 ಅಪರಾಧಿಗಳ ಪೈಕಿ 7 ಮಂದಿಗೆ ಮರಣದಂಡನೆ ವಿಧಿಸಿದ NIA ನ್ಯಾಯಾಲಯ

Update: 2023-03-01 11:55 IST

ಹೊಸದಿಲ್ಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಿಶೇಷ ನ್ಯಾಯಾಲಯವು ಫೆಬ್ರವರಿ 28 ರಂದು ಭೋಪಾಲ್-ಉಜ್ಜಯಿನಿ ಪ್ಯಾಸೆಂಜರ್ ರೈಲು ಸ್ಫೋಟ ಪ್ರಕರಣದಲ್ಲಿ ಎಂಟು ಅಪರಾಧಿಗಳ ಪೈಕಿ ಏಳು ಮಂದಿಗೆ ಮರಣದಂಡನೆ ವಿಧಿಸಿತು.

ಮತ್ತೊಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

ಮುಹಮ್ಮದ್ ಫೈಸಲ್, ಗೌಸ್ ಮುಹಮ್ಮದ್ ಖಾನ್, ಅಝರ್, ಅತೀಫ್ ಮುಝಾಫರ್, ಡ್ಯಾನಿಶ್, ಮೀರ್ ಹುಸೇನ್ ಹಾಗೂ  ಆಸಿಫ್ ಇಕ್ಬಾಲ್ ಗೆ ಮರಣದಂಡನೆ ಹಾಗೂ  ಅತೀಫ್ ಇರಾಕಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

ಭೋಪಾಲ್-ಉಜ್ಜಯಿನಿ ಪ್ಯಾಸೆಂಜರ್ ರೈಲು ಬಾಂಬ್ ಸ್ಫೋಟವು ಮಾರ್ಚ್ 7, 2017 ರಂದು ಸಂಭವಿಸಿದ್ದು, ಇದೊಂದು  ಭಯೋತ್ಪಾದಕ ದಾಳಿಯಾಗಿತ್ತು.

Similar News