×
Ad

ಸೆಂಟರ್‌ ಫಾರ್‌ ಪಾಲಿಸಿ ರಿಸರ್ಚ್‌ನ ಎಫ್‌ಸಿಆರ್‌ಎ ಪರವಾನಗಿ ರದ್ದುಗೊಳಿಸಿದ ಕೇಂದ್ರ

Update: 2023-03-01 18:13 IST

ಹೊಸದಿಲ್ಲಿ: ಖ್ಯಾತ ಸಂಶೋಧನಾ ಸಂಸ್ಥೆ –ಸೆಂಟರ್‌ ಫಾರ್‌ ಪಾಲಿಸಿ ರಿಸರ್ಚ್‌ ಆದಾಯ ತೆರಿಗೆ ಕಾನೂನುಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ವಿದೇಶಿ ಅದರ ದೇಣಿಗೆ ನಿಯಂತ್ರಣ ಕಾಯಿದೆ (ಎಫ್‌ಸಿಆರ್‌ಎ) ಪರವಾನಗಿಯನ್ನು ಕೇಂದ್ರ ಗೃಹ ಸಚಿವಾಲಯ ಇಂದು ರದ್ದುಗೊಳಿಸಿದ ಬೆನ್ನಲ್ಲೇ ಸಂಸ್ಥೆ ಪ್ರತಿಕ್ರಿಯಿಸಿ ತಾನು ಎಲ್ಲಾ ರೀತಿಯ ಪರಿಹಾರ ಕ್ರಮಗಳನ್ನು ಅನ್ವೇಷಿಸುವುದಾಗಿ ಹೇಳಿದೆ. ಎಫ್‌ಸಿಆರ್‌ಎ ಪರವಾನಗಿ ರದ್ದುಗೊಂಡಿರುವುದರಿಂದ ಸಂಸ್ಥೆಯು ಇನ್ನು ಮುಂದೆ ವಿದೇಶಿ ದೇಣಿಗೆ ಪಡೆಯುವ ಹಾಗಿಲ್ಲ.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮಾನ್ಯ ಸಂಸ್ಥೆಯಾಗಿರುವ ಸೆಂಟರ್‌ ಫಾರ್‌ ಪಾಲಿಸಿ ರಿಸರ್ಚ್‌,  ಇಂಡಿಯನ್‌ ಕೌನ್ಸಿಲ್‌ ಫಾರ್‌ ಸೋಶಿಯಲ್‌ ಸಾಯನ್ಸ್‌ ರಿಸರ್ಚ್‌ ನಿಂದ ಅನುದಾನ ಪಡೆಯುತ್ತಿದೆ. ಅದಕ್ಕೆ ದೇಣಿಗೆ ನೀಡುವವರಲ್ಲಿ ಬಿಲ್‌ ಎಂಡ್‌ ಮೆಲಿಂಡಾ ಗೇಟ್ಸ್‌ ಫೌಂಡೇಶನ್‌, ಯುನಿವರ್ಸಿಟಿ ಆಫ್‌ ಪೆನ್ನಿಸಿಲ್ವೇನಿಯಾ, ದಿ ವರ್ಲ್ಡ್‌ ರಿಸೋರ್ಸಸ್‌ ಇನ್‌ಸ್ಟಿಟ್ಯೂಟ್‌ ಮತ್ತು ಡ್ಯೂಕ್‌ ಯುನಿವರ್ಸಿಟಿ ಸೇರಿವೆ.

ಕಳೆದ ವರ್ಷದ ಸೆಪ್ಟೆಂಬರ್‌ ತಿಂಗಳಿನಲ್ಲಿ ಆದಾಯ ತೆರಿಗೆ ಇಲಾಖೆಯು ಸಂಸ್ಥೆಯ ಕಚೇರಿಗಳಲ್ಲಿ ಸಮೀಕ್ಷೆ ನಡೆಸಿ ನಂತರ ಹಲವು ನೋಟಿಸ್‌ ಜಾರಿಗೊಳಿಸಿತ್ತು. ಎಫ್‌ಸಿಆರ್‌ಎ ದೇಣಿಗೆಗಳ ಕುರಿತು ಮಾಹಿತಿ ನೀಡುವಂತೆ ಸಂಸ್ಥೆಗೆ ಸೂಚಿಸಿದೆಯೆನ್ನಲಾಗಿದ್ದು ಅದರ ಎಫ್‌ಸಿಆರ್‌ಎ ಪರವಾನಗಿ 2021 ರಲ್ಲಿ ನವೀಕರಣಗೊಳ್ಳಬೇಕಿತ್ತು.

Similar News