×
Ad

ಚಿಂತನ ಚಿಲುಮೆ ‘ಸಿಪಿಆರ್’ನ ವಿದೇಶಿ ದೇಣಿಗೆ ಪರವಾನಗಿ ಅಮಾನತು

Update: 2023-03-01 21:18 IST

ಹೊಸದಿಲ್ಲಿ, ಮಾ.1: ನೀತಿ ಸಂಶೋಧನೆ ಕುರಿತ ಚಿಂತನಾ ಚಿಲುಮೆ ಕೇಂದ್ರ (CPR) ಸಂಸ್ಥೆಗೆ ವಿದೇಶಿ ದೇಣಿಗೆ ಸ್ವೀಕರಿಸಲು ನೀಡಲಾದ ಎಫ್‌ಸಿಆರ್‌ಎ(FCRA) ಪರವಾನಿಗೆಯನ್ನು ಕೇಂದ್ರ ಗೃಹ ಸಚಿವಾಲಯವು ಬುಧವಾರ ಅಮಾನತಿನಲ್ಲಿರಿಸಿದೆ.

ಆದಾಯತೆರಿಗೆ ಇಲಾಖೆಯು ಸಿಪಿಆರ್ನ ಕಾರ್ಯಾಲಯದ ಲೆಕ್ಕಪತ್ರಗಳ ಸಮೀಕ್ಷೆಯನ್ನು ನಡೆಸಿದ ತಿಂಗಳುಗಳ ನಂತರ ಸಿಪಿಆರ್ನ ಎಫ್ಸಿಆರ್ಎ ಪರವಾನಗಿಯನ್ನು ಕೇಂದ್ರಗೃಹ ಸಚಿವಾಲಯ ಅಮಾನತುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ಎಫ್ಸಿಆರ್ಎ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಸಿಪಿಆರ್ನ ಪರವಾನಗಿಯನ್ನು ಅಮಾನತಿನಲ್ಲಿರಿಸಲಾಗಿದೆಯೆಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2010ರ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCR)ಯಡಿ ಈ ಪರವಾನಗಿಯನ್ನು ನೀಡಲಾಗುತ್ತದೆ. ವ್ಯಕ್ತಿಗಳು ಹಾಗೂ ಸಂಘಟನೆಗಳು ವಿದೇಶಗಳಿಂದ ಆರ್ಥಿಕ ದೇಣಿಗೆಯನ್ನು ಸ್ವೀಕರಿಸುವುದನ್ನು ಈ ಕಾನೂನು ನಿಯಂತ್ರಿಸುತ್ತದೆ.

ನಿರ್ದಿಷ್ಟ ವ್ಯಕ್ತಿಗಳು ಅಥವಾ ಸಂಸ್ಥೆಗಳು ಅಥವಾ ಕಂಪೆನಿಗಳು ವಿದೇಶಿ ದೇಣಿಗೆಯ ಸ್ವೀಕರಿಸುವುದನ್ನು ಹಾಗೂ ಬಳಸಿಕೊಳ್ಳುವುದನ್ನು ನಿಯಮಿತಗೊಳಿಸಲು ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದ ಯಾವುದೇ ಚಟುವಟಿಕೆಗಳಿಗಾಗಿ ವಿದೇಶಿ ದೇಣಿಗೆ ಅಥವಾ ವಿದೇಶಿ ನೆರವಿನ ಸ್ವೀಕಾರ ಹಾಗೂ ಬಳಕೆಯನ್ನು ತಡೆಯಲು ಸಂಸತ್ ಎಫ್ಸಿಆರ್ಎ ಕಾಯ್ದೆಯನ್ನು 2010ರಲ್ಲಿ ಜಾರಿಗೆ ತಂದಿತ್ತು.

Similar News