×
Ad

ಉಳ್ಳಾಲ: ನಾಡದೋಣಿಗಳಿಗೆ ತಗುಲಿದ ಬೆಂಕಿ; ಲಕ್ಷಾಂತರ ನಷ್ಟ

Update: 2023-03-02 19:56 IST

ಉಳ್ಳಾಲ: ಸೋಮೇಶ್ವರ ಕಡಲ ಕಿನಾರೆಯಲ್ಲಿದ್ದ ಎರಡು ದೋಣಿಗಳಿಗೆ ಬೆಂಕಿ ತಗುಲಿದ ಪರಿಣಾಮ ದೋಣಿ ಮತ್ತು ಮೀನಿನ ಬಲೆ ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. 

ಸೋಮೇಶ್ವರದ ಮೀನುಗಾರರಾದ ಅನಿಲ್ ಮತ್ತು ಶೇಖರ್ ಎಂಬವರಿಗೆ ಸೇರಿದ ನಾಡ ದೋಣಿಗೆ ಗುರುವಾರ ಮಧ್ಯಾಹ್ನ ಬೆಂಕಿ ತಗುಲಿದೆ. ಸೋಮೇಶ್ವರ ಬಾಸಿತ್ತಾಯರ ಬೈಲಿನ ಸಮುದ್ರ ಕಿನಾರೆಯಲ್ಲಿ ಮೀನುಗಾರರು ನಾಡ ದೋಣಿಯನ್ನು ನಿಲ್ಲಿಸಿದ್ದರು. ಗುರುವಾರ ಮಧ್ಯಾಹ್ನ ದೋಣಿಗಳು ಬೆಂಕಿಗಾಹುತಿಯಾಗಿದ್ದು, ಬೆಂಕಿಯ ಕೆನ್ನಾಲಿಗೆ ಸಮೀಪದ ಪೊದೆಗಳಿಗೂ ವ್ಯಾಪಿಸಿದ್ದು ಸ್ಥಳೀಯರು ಬೆಂಕಿ  ನಂದಿಸಿದ್ದಾರೆ.

Similar News