ನಟಿ ಮೇಲೆ ಹಲ್ಲೆ ಪ್ರಕರಣ: ಪಲ್ಸರ್ ಸುನಿಯ ಜಾಮೀನು ಅರ್ಜಿ ತಿರಸ್ಕರಿಸಿದ ಕೇರಳ ಹೈಕೋರ್ಟ್
Update: 2023-03-06 22:32 IST
ತಿರುವನಂತಪುರಂ, ಮಾ. 6: 2017ರಲ್ಲಿ ನಡೆದ ಚಲನಚಿತ್ರ ನಟಿಯ ಮೇಲಿನ ಹಲ್ಲೆ ಪ್ರಕರಣದ ಪ್ರಧಾನ ಆರೋಪಿ ಪಲ್ಸರ್ ಸುನಿ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ. ಸುನಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ನ್ಯಾ. ಪಿ.ವಿ. ಕುಂಜಿಕೃಷ್ಣನ್ ತಿರಸ್ಕರಿಸಿದರು.
ಈ ಕುಖ್ಯಾತ ಪ್ರಕರಣದಲ್ಲಿ ಮಲಯಾಳಂ ಚಿತ್ರ ನಟ ದಿಲೀಪ್ ಕೂಡ ಓರ್ವ ಆರೋಪಿಯಾಗಿದ್ದಾರೆ. ಸುನಿಯ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಕಳೆದ ವರ್ಷ ಇದೇ ನ್ಯಾಯಾಧೀಶರು ಅವರನಿಗೆ ಜಾಮೀನು ನಿರಾಕರಿಸಿದ್ದರು. ಅವನು ಬಹುತೇಕ ಆರು ವರ್ಷಗಳಿಂದ ಜೈಲಿನಲ್ಲಿದ್ದಾನೆ. ಆತ ಪ್ರಕರಣದ ಮೊದಲನೇ ಆರೋಪಿಯಾಗಿದ್ದಾನೆ.
ದಿಲೀಪ್ ಸೂಚನೆಯಂತೆ ಖ್ಯಾತ ನಟಿಯೊಬ್ಬರನ್ನು ಅಪಹರಿಸಿ, ಕಾರಿನಲ್ಲಿ ಲೈಂಗಿಕ ದೌರ್ಜನ್ಯ ನಡೆಸಿ ಚಿತ್ರಗಳನ್ನು ತೆಗೆಯಲಾಯಿತೆನ್ನಲಾದ ಪ್ರಕರಣ ಇದಾಗಿದೆ.