×
Ad

ಜಾಗತಿಕ ಅಣಕು ನ್ಯಾಯಾಲಯ ಸ್ಪರ್ಧೆ: ಉಡುಪಿ ವಿಬಿಸಿಎಲ್‌ಗೆ 2ನೇ ಬಹುಮಾನ

Update: 2023-03-08 18:42 IST

ಉಡುಪಿ, ಮಾ.8: ಹೊಸದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ಪ್ರೊ.ಎನ್.ಆರ್ ಮಾಧವ ಮೆನನ್ ಜಾಗತಿಕ ಅಣಕು ನ್ಯಾಯಾಲಯ ಸ್ಪರ್ಧೆ-2023ರಲ್ಲಿ ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ ತಂಡ ಎರಡನೇ ಬಹುಮಾನ ಗೆದ್ದುಕೊಂಡಿದೆ.

ವಿಬಿಸಿಎಲ್‌ನ ವಿದ್ಯಾರ್ಥಿಗಳಾದ ಅಭಯ್ ಶ್ರೀಕುಮಾರ್ ಸಿ.ಎ, ಮರಿಯಾ ಥೆರೇಸಾ ಹಾಗೂ ಕೊಯಲ್ ಅವರನ್ನು ಒಳಗೊಂಡ ತಂಡ ದ್ವಿತೀಯ ಬಹುಮಾನ ಪಡೆದಿದೆ.

ಉತ್ತಮ ಸಾಧನೆ ತೋರಿದ ತಂಡಕ್ಕೆ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರು ಅಭಿನಂದನೆ ಸಲ್ಲಿಸಿದ್ದಾರೆ. ವಿಜೇತ ತಂಡದ ಜೊತೆ ಕಾಲೇಜಿನ ಕಾನೂನು ವಿಭಾಗದ ಮುಖ್ಯಸ್ಥೆ ಸುರೇಖ ಕೆ. ಇದ್ದಾರೆ. 

Similar News