×
Ad

ಮಂಗಳೂರು: ‘ಸಿಟಿ ಗೋಲ್ಡ್’ನಲ್ಲಿ ಸಾಧಕಿಯರಿಗೆ ಸನ್ಮಾನ

Update: 2023-03-08 19:03 IST

ಮಂಗಳೂರು: ನಗರದ ಕಂಕನಾಡಿ ಬೈಪಾಸ್ ರಸ್ತೆಯ ‘ಸಿಟಿಗೋಲ್ಡ್ ಆ್ಯಂಡ್ ಡೈಮಂಡ್ಸ್’ ಮಳಿಗೆಯಲ್ಲಿ ಬುಧವಾರ ಮಹಿಳಾ ದಿನ ಆಚರಿಸಲಾಯಿತು. ಈ ಸಂದರ್ಭ ಹೈನುಗಾರಿಕೆ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಮೂವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ನಗರ ಸಂಚಾರ ಎಸಿಪಿ ಗೀತಾ ಕುಲಕರ್ಣಿ ಭಾಗವಹಿಸಿ ಶುಭ ಹಾರೈಸಿದರು.

ಹೈನುಗಾರಿಕೆಯಲ್ಲಿ ಸಾಧನೆಗೈದ ಮಜೀದ್ ಫಾರ್ಮ್‌ನ ಮಾಲಕಿ ಮೈಮುನಾ ರಾಜ್‌ಕಮಾಲ್ ಮತ್ತವರ ಪುತ್ರಿ ಮರ್ಝೀನಾ ಹಾಗೂ ಪ್ರಾಣಿಗಳ ರಕ್ಷಣೆ ಮತ್ತು ಆರೈಕೆಯಲ್ಲಿ ತೊಡಗಿಸಿಕೊಂಡಿರುವ ರಜನಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮೈಮುನಾ ಮನುಷ್ಯನ ಜೀವನದಲ್ಲಿ ಯಾವುದೂ ಸಾಧ್ಯವಿಲ್ಲ ಎಂಬುದಿಲ್ಲ. ಪ್ರಯತ್ನ ಪಟ್ಟರೆ ಏನನ್ನು ಬೇಕಾದರೂ ಸಾಧಿಸಬಹುದು. ಸಾಧನೆಯ ಮೂಲಕ ನಾವು ಇತರರಿಗೆ ಪ್ರೇರಣೆಯಾಗ ಬೇಕಿದೆ ಎಂದರು.

ಜನಿ ಶೆಟ್ಟಿ ಮಾತನಾಡಿ ಜಾತಿ ಮತಕ್ಕಿಂತ ಮಾನವೀಯತೆಯೇ ಮುಖ್ಯವಾಗಿದೆ. ಪ್ರಾಣಿಗಳ ಸಂರಕ್ಕಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಿಟಿ ಗೋಲ್ಡ್‌ನ ಬ್ರಾಂಚ್ ಮ್ಯಾನೇಜರ್ ಅಹ್ಮದ್ ಹಫೀಝ್, ಮಾರ್ಕೆಟಿಂಗ್ ಮ್ಯಾನೇಜರ್ ಇಮ್ರಾನ್ ವಿ. ಹಾಗು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Similar News