ಮಹಿಳಾ ದಿನಾಚರಣೆ: ಮಾ.9ರಂದು ಮಾನಸಿ ಸುಧೀರ್‌ಗೆ ಸನ್ಮಾನ
Update: 2023-03-08 21:05 IST
ಉಡುಪಿ, ಮಾ.8: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ‘ಕಾಂತಾರ’ ಚಿತ್ರದ ನಟಿ ಮಾನಸಿ ಸುರ್ಧೀರ್ ಅವರನ್ನು ಮಾ.9ರಂದು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್‌ನಲ್ಲಿ ಸನ್ಮಾನಿಸಲಾಗುವುದು.
ಇತ್ತೀಚಿನ ಯಶಸ್ವಿ ಚಿತ್ರ ‘ಕಾಂತಾರ’ದಲ್ಲಿ ತಮ್ಮ ವಿಶಿಷ್ಟ ಪಾತ್ರಕ್ಕಾಗಿ ಮಾನಸಿ ಸುಧೀರ್ ವಿಶೇಷ ಮೆಚ್ಚುಗೆ ಪಡೆದಿದ್ದಾರೆ. ಭರತನಾಟ್ಯ ಕಲಾವಿದೆಯೂ, ಗಾಯಕಿಯೂ ಆಗಿರುವ ಇವರು ಇನ್ನೂ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ನೃತ್ಯನಿಕೇತನ ನೃತ್ಯ ಶಾಲೆ ಕೊಡವೂರೂರಿನ ಸಹ ನಿರ್ದೇಶಕಿಯಾಗಿದ್ದಾರೆ.
ನಾಳೆ ಅಪರಾಹ್ನ 3 ಗಂಟೆಗೆ ಗಾಂಧಿಯನ್ ಸೆಂಟರ್‌ನ ಸರ್ವೋದಯ ಸಭಾಂಗಣದಲ್ಲಿ ಅವರನ್ನು ಸನ್ಮಾನಿಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.