ಮಹಿಳಾ ಪ್ರೀಮಿಯರ್ ಲೀಗ್: ಆರ್‌ಸಿಬಿ ಗೆಲುವಿಗೆ 202 ರನ್ ಗುರಿ ನೀಡಿದ ಗುಜರಾತ್
ಅತ್ಯಂತ ವೇಗದ ಅರ್ಧಶತಕ ಸಿಡಿಸಿದ ಸೋಫಿಯಾ ಡಂಕ್ಲಿ
Update: 2023-03-08 21:15 IST
ಮುಂಬೈ, ಮಾ.8: ಹರ್ಲೀನ್ ಡಿಯೊಲ್(67 ರನ್, 45 ಎಸೆತ) ಹಾಗೂ ಸೋಫಿಯಾ ಡಂಕ್ಲಿ(65 ರನ್, 28 ಎಸೆತ)ಅರ್ಧಶತಕಗಳ ಕೊಡುಗೆ ಸಹಾಯದಿಂದ ಗುಜರಾತ್ ಜೈಂಟ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲುಪಿಎಲ್)ನ 6ನೇ ಪಂದ್ಯದ ಗೆಲುವಿಗೆ 202 ರನ್ ಗುರಿ ನೀಡಿದೆ.
ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಗುಜರಾತ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 201 ರನ್ ಗಳಿಸಿತು. ಆರ್‌ಸಿಬಿ ಪರ ಹೀದರ್ ನೈಟ್(2-17) ಹಾಗೂ ಶ್ರೇಯಾಂಕ ಪಾಟೀಲ್(2-32)ತಲಾ 2 ವಿಕೆಟ್ ಪಡೆದಿದ್ದಾರೆ.
ಡಂಕ್ಲಿ ಕೇವಲ 18 ಎಸೆತಗಳಲ್ಲಿ ಟೂರ್ನಿಯಲ್ಲಿ ಅತ್ಯಂತ ವೇಗದ ಅರ್ಧಶತಕ ಸಿಡಿಸಿದರು. ಒಂದೇ ಓವರ್‌ನಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 22 ರನ್ ಗಳಿಸಿ ಅರ್ಧಶತಕ ಪೂರೈಸಿದರು.