×
Ad

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಬೈಂದೂರು ತಾಲೂಕು ಘಟಕದ ಅಧ್ಯಕ್ಷರಾಗಿ ಬುವಾಜಿ ಮೊಹ್ಸಿನ್ ಆಯ್ಕೆ

Update: 2023-03-09 19:40 IST

ಬೈಂದೂರು, ಮಾ.9: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಬೈಂದೂರು ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಬುವಾಜಿ ಮೊಹ್ಸಿನ್ ಬೈಂದೂರು  ಆಯ್ಕೆಯಾಗಿದ್ದಾರೆ.

ಇಂದು ಜಮೀಯ್ಯತುಲ್ ಫಲಾಹ್ ಬೈಂದೂರು ಕಚೇರಿಯಲ್ಲಿ ನಡೆದ ಜಿಲ್ಲಾ ಮುಸ್ಲಿಂ ಒಕ್ಕೂಟ ಬೈಂದೂರು ತಾಲೂಕು ಘಟಕದ ಸಭೆಯಲ್ಲಿ 2023-24ನೇ ಸಾಲಿನ ಹೊಸ ಸಮಿತಿಯ ಆಯ್ಕೆ ನಡೆಯಿತು. 

ಕಾರ್ಯದರ್ಶಿಯಾಗಿ ತುಫೈಲ್ ಅಹ್ಮದ್ ಶಹಾಬುದ್ದೀನ್, ಉಪಾಧ್ಯಕ್ಷರಾಗಿ ಶೇಕ್ ಫಯಾಝ್ ಅಲಿ, ಜತೆ ಕಾರ್ಯದರ್ಶಿಯಾಗಿ ಅಮೀನ್ ಗೊಳಿಹೊಳೆ ಮತ್ತು ಕೋಶಾಧಿಕಾರಿಯಾಗಿ ಸಯ್ಯದ್ ಅಜ್ಮಲ್ ಸಾಹೇಬ್ ಶಿರೂರು ಇವರನ್ನು ಆಯ್ಕೆ ಮಾಡಲಾಯಿತು.‌

ಹುಸೇನ್ ಟಿ ಬೈಂದೂರು, ಖುರಶೀದ್ ಆಲಂ ಹಬೀಬುಲ್ಲ, ಮನ್ಸೂರ್ ಮರವಂತೆ, ಮುಸ್ತಫಾ ಬಡಾಕೆರೆ, ರೋಷನ್ ಅಬ್ದುಲ್ ಹಮೀದ್, ಕಲ್ಪತಿ ಮೊಹಮ್ಮದ್ ಶಬ್ಬರ್, ಕಾಪ್ಸಿ ಮೊಹಮ್ಮದ್ , ಮೊಹಮ್ಮದ್ ಅಶ್ರಫ್ ನನ್ನು, ಶೇಖ್ ಜಿ ಹಬೀಬುಲ್ಲ ತಾಲೂಕು  ಸಮಿತಿ  ಸದಸ್ಯರಾಗಿ ಆಯ್ಕೆಯಾದರು.

ತಬರೇಝ್ ನಾಗುರ್, ಕಾಕು ಇಕ್ಬಾಲ್ ಬೈಂದೂರು, ಶಬ್ಬಿರ್ ಆಕಳಬೈಲ್, ಝಕರಿಯಾ ಉಪ್ಪುಂದ, ಸಿರಾಜ್ ಹಲಗೇರಿ ಇವರನ್ನು ತಾಲೂಕು ಸಮಿತಿಯ ನಾಮ ನಿರ್ದೇಶನ ಸದಸ್ಯರಾಗಿ ನೇಮಿಸಲಾಯಿತು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇದ್ರೀಸ್ ಹೂಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಹುಸೈನ್ ಕಟಪಾಡಿ ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್ ಕೆ ಇಕ್ಬಾಲ್  ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.

ನಿಕಟಪೂರ್ವ ಅಧ್ಯಕ್ಷರಾದ ಹಸನ್ ಮಾವಡ್, ಬುವಾಜಿ ಮೊಹ್ಸಿನ್‌ರಿಗೆ  ಅಧಿಕಾರ ಹಸ್ತಾಂತರ ಮಾಡಿದರು. ಜಿಲ್ಲಾ ಸಮಿತಿಯ ನೂತನ ನಾಮ ನಿರ್ದೇಶಿತ ಸದಸ್ಯರಾದ ಎಚ್ ಎಸ್ ಸಿದ್ದಿಕ್ ಶಿರೂರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಬೈಂದೂರು ತಾಲೂಕು ಮೇಲ್ವಿಚಾರಕ ಹಸನ್ ಮಾವೆಡ್  ಸ್ವಾಗತಿಸಿದರು. ಕಾರ್ಯಕ್ರಮ ಶೇಕ್ ಫಯಾಜ್ ಅಲಿ ಅವರ ಕಿರಾಅತ್‌ನೊಂದಿಗೆ ಪ್ರಾರಂಭವಾಯಿತು. ತುಫೈಲ್ ಅಹ್ಮದ್ ವಂದಿಸಿದರು. 

Similar News