ಮಾ.11ರಂದು ಮದ್ರಸದ ವಾರ್ಷಿಕ ಕಾರ್ಯಕ್ರಮ
Update: 2023-03-10 21:24 IST
ಉಡುಪಿ, ಮಾ.10: ಉಡುಪಿ ಜಿಲ್ಲಾ ಜಮೀಯತೆ ಅಹ್ಲೆ ಹದೀಸ್ ಆಶ್ರಯದಲ್ಲಿ ಹೂಡೆಯ ಮದ್ರಸಾ ಉಬೈ ಬಿನ್ ಕಾಬ್ ವತಿಯಿಂದ ಮದ್ರಸದ ವಾರ್ಷಿಕ ಕಾರ್ಯಕ್ರಮವನ್ನು ಹೂಡೆಯ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಮಾ.11ರಂದು ರಾತ್ರಿ 8.30 ಗಂಟೆಯಿಂದ 10ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಇಸ್ಲಾಮಿನ ಹಿರಿಯ ವಿದ್ವಾಂಸ ಶೇಕ್ ಝಫರುಲ್ ಹಸನ್ ಮದನಿ ಪ್ರವಚನ ನೀಡಲಿರುವರು ಎಂದು ಪ್ರಕಟಣೆ ತಿಳಿಸಿದೆ.