×
Ad

​ ದಿಲ್ಲಿ: ಹೋಳಿ ಆಚರಣೆ ವೇಳೆ ಜಪಾನ್ ಯುವತಿಗೆ ಕಿರುಕುಳ; ವೀಡಿಯೊ ವೈರಲ್

Update: 2023-03-10 23:33 IST

ಹೊಸದಿಲ್ಲಿ, ಮಾ. 10: ಹೊಸದಿಲ್ಲಿಯಲ್ಲಿ ಬುಧವಾರ ಹೋಳಿ ಹಬ್ಬ ಆಚರಣೆ ಸಂದರ್ಭ ಜಪಾನ್ ಯುವತಿಯೋರ್ವಳಿಗೆ ಯುವಕರ ಗುಂಪೊಂದು ಕಿರುಕುಳ ನೀಡಿದ ಘಟನೆ ನಡೆದಿದೆ.  ಘಟನೆಯ ಕುರಿತ ವೀಡಿಯೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಹಲವರು ಆಗ್ರಹಿಸಿದ್ದಾರೆ. 

ವೀಡಿಯೊದಲ್ಲಿ ಯುವಕರ ಗುಂಪು ಆಕೆಯನ್ನು ಹಿಡಿದುಕೊಂಡು ‘ಹೋಳಿ ಹೈ’ ಎಂದು ಘೋಷಣೆ ಕೂಗುತ್ತಿರುವುದು ಹಾಗೂ ಆಕೆಯ ಮುಖಕ್ಕೆ ಬಣ್ಣ ಬಳಿಯುತ್ತಿರುವುದು ಕಂಡು ಬಂದಿದೆ. ಓರ್ವ ಬಾಲಕ ಆಕೆಯ ತಲೆಯ ಮೇಲೆ ಮೊಟ್ಟೆ ಒಡೆಯುವುದು ಕೂಡ ವೀಡಿಯೊದಲ್ಲಿ ದಾಖಲಾಗಿದೆ. 

ಗುಂಪಿನಿಂದ ತಪ್ಪಿಸಿಕೊಳ್ಳುವ ಮುನ್ನ ತನ್ನನ್ನು ಹಿಡಿಯಲು   ಪ್ರಯತ್ನಿಸಿದ ವ್ಯಕ್ತಿಯೋರ್ವನಿಗೆ ಆಕೆ ಕಪಾಳಮೋಕ್ಷ ಮಾಡಿರುವುದು ವೀಡಿಯೊದಲ್ಲಿ ಕಂಡು ಬಂದಿದೆ.
‘‘ವೀಡಿಯೊದಲ್ಲಿ ಕಂಡು ಬರುವ ದೃಶ್ಯಗಳ ಆಧಾರದಲ್ಲಿ ಈ ವೀಡಿಯೊ ಪಹಾರ್‌ಗಂಜ್‌ಗೆ ಸಂಬಂಧಿಸಿದ್ದೆಂದು ಕಾಣುತ್ತದೆ. ಆದರೂ, ಈ ಪ್ರದೇಶದಲ್ಲಿ ಇಂತಹ ಘಟನೆ ನಡೆದಿದೆಯೇ ? ಅಥವಾ ಹಳೆ ವೀಡಿಯೊ ಆಗಿರಬಹುದೇ ಎಂದು ಪರಿಶೀಲನೆ ನಡೆಸಲಾಗುವುದು’’ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ. 

Similar News