ಕೇಂದ್ರ ಸರಕಾರದಿಂದ ಖಲಿಸ್ತಾನ ಪರ 6 ಯುಟ್ಯೂಬ್ ಚಾನೆಲ್ ಸ್ಥಗಿತ
Update: 2023-03-10 23:47 IST
ಹೊಸದಿಲ್ಲಿ, ಮಾ. 10: ಖಲಿಸ್ಥಾನ ಪರ ಭಾವನೆಗಳನ್ನು ಪ್ರಚೋದಿಸುತ್ತಿದೆ ಎಂದು ಹೇಳಲಾದ ಕನಿಷ್ಠ 6 ಯುಟ್ಯೂಬ್ ಚಾನೆಲ್‌ಗಳನ್ನು ಕೇಂದ್ರ ಸರಕಾರದ ಆದೇಶದಂತೆ ಸ್ಥಗಿತಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ವಿದೇಶಗಳಿಂದ ಕಾರ್ಯಾಚರಿಸುತ್ತಿರುವ 6ರಿಂದ 8 ಯುಟ್ಯೂಬ್ ಚಾನೆಲ್‌ಗಳನ್ನು ಕಳೆದ 10 ದಿನಗಳಲ್ಲಿ ಸ್ಥಗಿತಗೊಳಿಸಲಾಗಿದೆ. ಪಂಜಾಬ್ ಭಾಷೆಯ ಈ ಚಾನೆಲ್‌ಗಳ ಸಮಸ್ಯೆ ಸೃಷ್ಟಿಸುತ್ತಿವೆ ಎಂದು ಮಾಹಿತಿ ಹಾಗೂ ಪ್ರಸಾರ ಖಾತೆಯ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು ಹೇಳಿದ್ದಾರೆ.
ತಮ್ಮ ಓರ್ವ ಸಹವರ್ತಿಯನ್ನು ಬಿಡುಗಡೆಗೊಳಿಸುಂತೆ ಆಗ್ರಹಿಸಿ ತೀವ್ರವಾದಿ ಬೋಧಕ ಹಾಗೂ ಖಲಿಸ್ತಾನದ ಬಗ್ಗೆ ಅನುಕಂಪೆ ಹೊಂದಿರುವ ಅಮೃತಪಾಲ್ ಅವರ ಬೆಂಬಲಿಗರು ಅಜ್ನಾಲಾ ಪೊಲೀಸ್ ಠಾಣೆ ನುಗ್ಗಿ ದಾಂಧಲೆ ನಡೆಸಿದ ಹಿನ್ನಲೆಯಲ್ಲಿ ಕೇಂದ್ರ ಸರಕಾರ ಈ ಕ್ರಮ ತೆಗೆದುಕೊಂಡಿದೆ.